alex Certify ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ʼಪರಿಹಾರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ʼಪರಿಹಾರʼ

ಮುಖದ ಮೇಲೆ ಮೊಡವೆ ಅನ್ನೋದು ಮಹಿಳೆಯರು ಹಾಗೂ ಪುರುಷರಲ್ಲಿ ಸಾಮಾನ್ಯ. ಹಾರ್ಮೋನ್ ಸಮಸ್ಯೆಯಿಂದಾಗಿ ಈ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಹಿಳೆಯರಲ್ಲಿ 20, 30, 40 ವರ್ಷದವರೆಗೆ ಈ ಮೊಡವೆಗಳು ಮುಖದಲ್ಲಿ ಕಾಣಿಸಿಕೊಳ್ಳುತ್ತವೆ.

ವೈದ್ಯರ ಪ್ರಕಾರ ಮಹಿಳೆಯರಲ್ಲಿ ಮೊಡವೆಗಳು ಆಗೋದಕ್ಕೆ ಮುಖ್ಯ ಕಾರಣ ಋತುಚಕ್ರ. ಈ ಸಮಯದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಮೊಡವೆ ಋತುಚಕ್ರ ಮುಗಿದ ಬಳಿಕ ಮಾಯವಾಗುತ್ತವೆ. ಇದಕ್ಕೆ ಕಾರಣ ಋತುಚಕ್ರದ ಸಮಯದಲ್ಲಿ ಬಿಡುಗಡೆಯಾಗುವ ಓಯೆಸ್ಟ್ರೋಜೆನ್  ಎಂಬ ಹಾರ್ಮೋನು. ಮತ್ತೊಂದು ಕಾರಣವೆಂದರೆ ಹಾರ್ಮೋನುಗಳ ಅಸಮತೋಲನದಿಂದ ಪಾಲಿಸ್ಟಿಕ್ ಓವೆರಿಯನ್ ಖಾಯಿಲೆಯಿಂದಾಗಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ.

ಇನ್ನು ಸಕ್ಕರೆ ಖಾಯಿಲೆ, ಒಬೆಸಿಟಿಯಂಥ ಖಾಯಿಲೆಗಳಿಗೆ ಮಾತ್ರೆ ತೆಗೆದುಕೊಳ್ಳುವುದರಿಂದಲೂ ಮೊಡವೆ ಉಂಟಾಗಬಹುದು. ಅಲ್ಲದೇ ಮಾನಸಿಕ ಒತ್ತಡ, ಧೂಮಪಾನ, ಅನಾರೋಗ್ಯಕರ ಲೈಫ್ ಸ್ಟೈಲ್ ನಿಂದಾಗಿಯೂ ಇದು ಬರಬಹುದು.

ವೈದ್ಯರು ಹೇಳುವ ಪ್ರಕಾರ ಇಂತಹ ಮೊಡವೆಗಳಿಗೆ ಪರಿಹಾರವೆಂದರೆ ಒಳ್ಳೆಯ ಲೈಫ್ ಸ್ಟೈಲ್ ರೂಢಿಸಿಕೊಳ್ಳುವುದು, ಹೆಚ್ಚೆಚ್ಚು ನೀರು ಕುಡಿಯುವುದು. ತೂಕ ಕಡಿಮೆ ಮಾಡಿಕೊಳ್ಳುವುದು. ನಿಯಮಿತವಾಗಿ ಬಾಡಿ ಮಸಾಜ್ ಮಾಡಿಸಿಕೊಳ್ಳುವುದು, ವ್ಯಾಯಾಮ ಮಾಡುವುದರಿಂದ ಹಾರ್ಮೋನ್ ಕಾರಣದಿಂದ ಉಂಟಾಗುವ ಮೊಡವೆಗಳು ಕಡಿಮೆಯಾಗುತ್ತವೆ.

ಇನ್ನು ಟೊಮ್ಯಾಟೊ ರಸ, ನಿಂಬೆ ರಸ, ಮುಲ್ತಾನಿ ಮಿಟ್ಟಿ, ಗಂಧದ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದಲೂ ಮೊಡವೆ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...