
ಬದಲಾದ ಜೀವನಶೈಲಿಯಿಂದಾಗಿ ಮಹಿಳೆಯರು ಹಲವು ಸಮಸ್ಯೆಗಳಿಂದ ಬಳಲುವಂತಾಗಿದೆ. ಥೈರಾಯಿಡ್ ಕೂಡಾ ಅಂಥ ಸಮಸ್ಯೆಗಳಲ್ಲಿ ಒಂದು.
ಥೈರಾಯಿಡ್ ನಿಂದ ಕುತ್ತಿಗೆಯ ಭಾಗ ಊದಿಕೊಳ್ಳುವುದರ ಜೊತೆಗೆ ಗರ್ಭ ಕೋಶದ ಕಾಯಿಲೆಯೂ ಅಂಟಿಕೊಳ್ಳುತ್ತದೆ. ಇದರಿಂದ ಮಾನಸಿಕ ಖಿನ್ನತೆ ಹೆಚ್ಚುತ್ತದೆ. ಮುತ್ತುಗದ ಎಲೆಯಲ್ಲಿ ಇದಕ್ಕೆ ಪರಿಹಾರವಿದೆ.
ಮುತ್ತುಗದ ಗಿಡದ ಕಾಂಡದ ಭಾಗದಲ್ಲಿರುವ ಚಕ್ಕೆಯನ್ನು ಕುಟ್ಟಿ ಪುಡಿ ಮಾಡಿ ಅದನ್ನು ಚೂರ್ಣವಾಗಿ ತಯಾರಿಸಿಕೊಳ್ಳಿ. 2 ಗ್ರಾಂ ಚೂರ್ಣವನ್ನು 300 ಎಂಎಲ್ ನೀರಿನೊಂದಿಗೆ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಬೇಕು. 300 ಎಂ ಎಲ್ ನೀರು 100 ಎಂ ಎಲ್ ಗೆ ಇಳಿಯಲಿ. ನಂತರ ಅದನ್ನು ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯುತ್ತಾ ಬಂದರೆ 6 ತಿಂಗಳಲ್ಲಿ ಥೈರಾಯಿಡ್ ಸಂಪೂರ್ಣ ವಾಸಿಯಾಗಿ ಗರ್ಭಕೋಶಕ್ಕೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆಗಳಿದ್ದರೂ ಗುಣವಾಗುತ್ತದೆ.