ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದು, ಹೀಗಾಗಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಹೀಗೆ ಬಂದ ವೇಳೆ ಬೆಳೆ ಮಾತ್ರವಲ್ಲದೆ ಮಾನವನ ಪ್ರಾಣಹಾನಿಗೂ ಕಾರಣವಾಗುತ್ತಿವೆ. ಈ ಹಿನ್ನಲೆಯಲ್ಲಿ ಕಾಡಾನೆಗಳ ಉಪಟಳ ತಪ್ಪಿಸಲು ಕುಶಾಲನಗರ ವಲಯ ಅರಣ್ಯಾಧಿಕಾರಿಗಳು ವಿಶೇಷ ಯೋಜನೆ ರೂಪಿಸಿದ್ದಾರೆ.
ಕುಶಾಲನಗರ ಸಮೀಪದ ಅತ್ತೂರು, ಆನೆಕಾಡು ಮತ್ತು ಮೀನು ಕೊಲ್ಲಿ ವ್ಯಾಪ್ತಿಯ ಅರಣ್ಯದ ನಡುವೆ ಸುಮಾರು 75ಕ್ಕೂ ಅಧಿಕ ಕಾಡೆಮ್ಮೆಗಳು ನೆಲೆ ಕಂಡುಕೊಂಡಿವೆ ಎನ್ನಲಾಗಿದ್ದು, ಇವುಗಳು ಆಹಾರ ಅರಸಿಕೊಂಡು ನಾಡಿಗೆ ಬರುತ್ತಿರುವ ಕಾರಣ ಗದ್ದೆ, ತೋಟ ಹಾಳಾಗುತ್ತಿರುವುದು ಸಾಮಾನ್ಯವಾಗಿದೆ.
BIG NEWS: ಕಲುಷಿತ ನೀರು ಸೇವನೆಗೆ ಮತ್ತೊಂದು ಬಲಿ; 7ಕ್ಕೇರಿದ ಸಾವಿನ ಸಂಖ್ಯೆ
ಈ ಹಿನ್ನೆಲೆಯಲ್ಲಿ ಕಾಡಾನೆಗಳು ಬರುವ ಮಾರ್ಗಗಳಲ್ಲಿ ಅರಣ್ಯಾಧಿಕಾರಿಗಳು ಲೋಡುಗಟ್ಟಲೆ ಹಲಸು ಮತ್ತಿತರ ಹಣ್ಣುಗಳನ್ನು ರಾಶಿ ಹಾಕುತ್ತಿದ್ದು, ಇವುಗಳನ್ನು ತಿನ್ನುವ ಕಾಡಾನೆಗಳು ನಾಡಿಗೆ ಬರುವುದು ತಪ್ಪುತ್ತದೆ ಎಂಬ ನಿರೀಕ್ಷೆಯಿದೆ. ಯೋಜನೆಗೆ ‘ವೈಲ್ಡ್ ಎಲಿಫೆಂಟ್ ಫುಡ್ ಪ್ಯಾಕೇಜ್’ ಎಂದು ಹೆಸರಿಸಲಾಗಿದ್ದು, ವಿಶ್ವ ಪರಿಸರ ದಿನಾಚರಣೆ ದಿನವಾದ ಜೂನ್ 5ರಿಂದ ಇದು ಚಾಲನೆಗೆ ಬಂದಿದೆ.