
ಕಾರ್ನ್‌ವಾಲ್‌ನಲ್ಲಿ ನೆಲೆಸಿರುವ ಕೇಟ್ ಆರ್ಚರ್ಡ್ 2ನೇ ಮಹಾಯುದ್ಧದ ಸಮಯದಲ್ಲಿ ರಾಯಲ್ ಏರ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಅವರು 1941 ರಿಂದ 1945 ರವರೆಗೆ ನಾಜಿಗಳ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಿದ್ದರು. ವಿಮಾನವು ಪ್ರತಿಕೂಲವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸಿದ ನಂತರ, ಅವರು ರಾಯಲ್ ಏರ್ ಫೋರ್ಸ್‌ಗೆ ಮಾಹಿತಿಯನ್ನು ರವಾನಿಸುತ್ತಾರೆ. ಈ ಮಾಹಿತಿಯ ಪರಿಣಾಮವಾಗಿ ಪೈಲಟ್‌ಗಳು ಮತ್ತು ಸೈನಿಕರು ಯಾವ ವಿಮಾನಗಳನ್ನು ಹೊಡೆದುರುಳಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಯಿತು.
ಆರ್ಚರ್ಡ್ ತನ್ನ 100ನೇ ಹುಟ್ಟುಹಬ್ಬದ ಒಂದು ವಾರದ ಮೊದಲು ಮಿಲಿಟರಿ ಚಾರಿಟಿಗಾಗಿ ಹಣವನ್ನು ದಾನ ಮಾಡಲು ಬಯಸಿದ್ದರು. ಹೀಗಾಗಿ ಮತ್ತೆ ಕಾಕ್ ಪಿಟ್ ನಲ್ಲಿ ಕುಳಿತು ವಿಮಾನವನ್ನು ಆಕಾಶಕ್ಕೆ ಹಾರಿಸಿದ್ದಾರೆ. ಮತ್ತೆ ಗಗನಕ್ಕೇರುವ ಮೂಲಕ ಹೆಲ್ಪ್ ಫಾರ್ ಹೀರೋಸ್ ಗೆ ಹಣ ಸಂಗ್ರಹಿಸುತ್ತಿದ್ದಾರೆ.
ಅಂದಹಾಗೆ, ಆರ್ಚರ್ಡ್ ಆಂಗ್ಲೋ-ಇಂಡಿಯನ್ ಸಹೋದರರು ಮತ್ತು ಸಹೋದರಿಯರ ಕುಟುಂಬದಲ್ಲಿ ಜನಿಸಿದವರು. ಆಕೆಯ ತಂದೆ ಆರ್ಚರ್ಡ್ ಬಾಲ್ಯದಲ್ಲಿರುವಾಗ ಭಾರತೀಯ ರೈಲ್ವೆಯಲ್ಲಿ ಮುಖ್ಯ ಟೆಲಿಗ್ರಾಫ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆರ್ಚರ್ಡ್ ಮತ್ತು ಅವರ ಇಬ್ಬರು ಸಹೋದರಿಯರು ಮಹಿಳಾ ಸಹಾಯಕ ವಾಯುಪಡೆಯನ್ನು 1941 ರಲ್ಲಿ ಭಾರತದಲ್ಲಿ ಸ್ಥಾಪಿಸಿದಾಗ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದರು.