ಮನೆ ನಿರ್ಮಿಸಲು ವಾಸ್ತು ಎಷ್ಟು ಮುಖ್ಯನೋ ಮನೆಯ ಸುತ್ತಲೂ ಸುರಕ್ಷತೆಗಾಗಿ ಮಾಡುವ ಕಾಂಪೌಂಡ್ ಗೂ ಕೂಡ ವಾಸ್ತು ಅಷ್ಟೇ ಮುಖ್ಯ. ಹಾಗಾಗಿ ನಾಲ್ಕು ದಿಕ್ಕುಗಳಲ್ಲಿ ಕಾಂಪೌಂಡ್ ಮಾಡುವಾಗ ಈ ನಿಯಮ ತಪ್ಪದೇ ಪಾಲಿಸಿ.
ಮನೆಗೆ ಕಾಂಪೌಂಡ್ ನಿರ್ಮಿಸುವಾಗ ದಕ್ಷಿಣ ದಿಕ್ಕಿನ ಕಟ್ಟಡ ಇತರ ದಿಕ್ಕುಗಳಿಗಿಂತ ಎತ್ತರದಲ್ಲಿರಬೇಕು. ಪಶ್ವಿಮ ದಿಕ್ಕಿನ ಕಟ್ಟಡವನ್ನು ದಕ್ಷಿಣದಿಕ್ಕಿನ ಕಟ್ಟಡಕ್ಕಿಂತ ಕೆಳಗೆ ಮಾಡಬೇಕು. ಹಾಗೇ ಉತ್ತರ ಮತ್ತು ಪೂರ್ವ ದಿಕ್ಕಿನ ಗೋಡೆಗಳ ಎತ್ತರವು ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಿಗಿಂತ ಕಡಿಮೆ ಇರಬೇಕು.
ಇದಲ್ಲದೇ ಉತ್ತರ ದಿಕ್ಕಿನ ಗೋಡೆಯನ್ನು ನಿರ್ಮಿಸುವಾಗ ಎಲ್ಲಾ ದಿಕ್ಕಿನ ಗೋಡೆಗಳನ್ನು ನಿರ್ಮಿಸಿದ ಬಳಿಕ ಕೊನೆಯದಾಗಿ ಮಾಡಬೇಕು. ಹೀಗೆ ಮಾಡುವುದರಿಂದ ಹಣವು ಮನೆಯಲ್ಲಿ ಇರುತ್ತದೆ. ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.