ಮುಖದಲ್ಲಿ ತುಂಬಾ ಮೊಡವೆಗಳಿವೆ ಅಂತಾ ಚಿಂತಿಸುತ್ತಿದ್ದೀರಾ..? ನೈಸರ್ಗಿಕವಾದ ಅಲೋವೆಲಾ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ಮುಖ ಕಾಂತಿಯುಕ್ತವಾಗುತ್ತದೆ. ಈ ಅಲೋವೆರಾ ಫೇಸ್ ಪ್ಯಾಕ್ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ ಬನ್ನಿ.
– ಎಣ್ಣೆ ಚರ್ಮ ಅಥವಾ ಮೊಡವೆ ಸಮಸ್ಯೆಗೆ ಮಾಡಿ ಈ ಪ್ಯಾಕ್:
ಮೊದಲಿಗೆ ಒಂದು ಎಲೆ ಅಲೋವೆರಾದಿಂದ ಜೆಲ್ ತೆಗೆಯಿರಿ. ಆ ಜೆಲ್ ನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ನುಣ್ಣಗೆ ಪೇಸ್ಟ್ ರೀತಿ ಮಾಡಿಕೊಂಡು ಒಂದು ಬಾಕ್ಸ್ ನಲ್ಲಿ ಎತ್ತಿಡಿ. ನಂತರ ಒಂದು ಟೀ ಸ್ಪೂನ್ ಮುಲ್ತಾನಿ ಮಿಟ್ಟಿ (ಮೆಡಿಕಲ್ ನಲ್ಲಿ ಸಿಗುತ್ತದೆ) ಗೆ ಒಂದು ಟೀ ಸ್ಪೂನ್ ನಷ್ಟು ಅಲೋವೆರಾ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, 10 ನಿಮಿಷದ ಬಳಿಕ ತೊಳೆಯಿರಿ. ವಾರದಲ್ಲಿ 3 ದಿನ ಈ ರೀತಿ ಮಾಡಿದರೆ ಮುಖ ಕಾಂತಿಯುಕ್ತವಾಗುತ್ತದೆ.
4 ಟೀ ಸ್ಪೂನ್ ನಷ್ಟು ಅಲೋವೆರಾ ಪೇಸ್ಟ್ ಹಾಗೂ ಅಷ್ಟೇ ಪ್ರಮಾಣದಲ್ಲಿ ರೋಸ್ ವಾಟರ್ ನ್ನು ತೆಗೆದುಕೊಂಡು ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ಗೆ ಹಾಕಿಡಿ. ಪ್ರತಿದಿನ ಈ ಸ್ಪ್ರೇ ಬಾಟಲ್ ಮುಖಾಂತರ ಮುಖಕ್ಕೆ ಸಿಂಪಡಿಸಿದರೆ ಹೊಳೆಯುವ ಮುಖ ನಿಮ್ಮದಾಗುತ್ತದೆ.
ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ….!
– ಒಣ ಚರ್ಮಕ್ಕೆ ಫೇಸ್ ಪ್ಯಾಕ್:
3 ಟೀ ಸ್ಪೂನ್ ಯೋಗರ್ಟ್ ಗೆ 2 ಟೀ ಸ್ಪೂನ್ ನಷ್ಟು ಅಲೋವೆರಾ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷದ ಬಳಿಕ ತೊಳೆಯಿರಿ. ವಾರಕ್ಕೆ 3 ದಿನ ಈ ತರಹ ಮಾಡಿ ಹಚ್ಚಿಕೊಂಡರೆ ತ್ವಚೆ ಕಾಂತಿಯುಕ್ತವಾಗುತ್ತದೆ.
– ಮುಖದಲ್ಲಿ ಕಪ್ಪು ಕಲೆಗಳು, ಕಪ್ಪು ವರ್ತುಲಗಳನ್ನು ಹೋಗಲಾಡಿಸಲು ಫೇಸ್ ಪ್ಯಾಕ್:
2 ಟೀ ಸ್ಪೂನ್ ಅರಶಿನಕ್ಕೆ, 2 ಟೀ ಸ್ಪೂನ್ ಯೋಗರ್ಟ್ ಸೇರಿಸಿ, ಇದಕ್ಕೆ ಅಲೋವೆರಾ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕಪ್ಪು ಕಲೆಗಳು, ಕಪ್ಪು ವರ್ತುಲಗಳಿರುವಲ್ಲಿ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಪ್ರತಿದಿನ ಈ ರೀತಿ ಮಾಡಿದರೆ ನಿಮ್ಮ ಸಮಸ್ಯೆ ಶೀಘ್ರ ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.