
ಸೆಲಿಬ್ರಿಟಿಗಳು ಸೇರಿದಂತೆ ಸಂಘ ಸಂಸ್ಥೆಗಳು ಕೂಡ ರಿಷಬ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನು ಆರ್ ಎಸ್ ಎಸ್ ನ ಕಾರ್ಯಕರ್ತೆ ಜ್ಯೋತಿ ಸುಪರ್ಣಾ ಚಿಂಚೋಳಿ ಅವರು ಸಿನಿಮಾ ಬಗ್ಗೆ ಮಾತನಾಡುತ್ತಾ ಡಾ. ರಾಜ್ಕುಮಾರ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ.
ಹೌದು, ಕಾಂತಾರ ಸಿನಿಮಾ ಹೊಗಳುವ ಭರದಲ್ಲಿ ರಾಜ್ ಕುಟುಂಬದ ಮೇಲೆ ನೆಪೊಟಿಸಂ ಆರೋಪ ಹೊರಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪುನೀತ್ ರಾಜ್ ಕುಮಾರ್ ನೆಪೊ ಕಿಡ್ ಎಂದು ಹೇಳಿದ್ದಾರೆ. ಬಾಲಿವುಡ್ನಲ್ಲಿ ಕರಣ್ ಜೋಹರ್ ಇದ್ದಂತೆ, ಕರ್ನಾಟಕದಲ್ಲಿ ರಾಜ್ಕುಮಾರ್ ಅವರು. ಅವರ ಮಕ್ಕಳು ಅಂದರೆ ನೆಪೋಕಿಡ್ಸ್ ದೇವರಿದ್ದಂತೆ ಎಂದಿದ್ದಾರೆ. ಬೇರೆ ನಟರು ಸ್ಯಾಂಡಲ್ವುಡ್ನಲ್ಲಿ ಇಲ್ಲಿ ಉಳಿಯಬೇಕಾದರೆ ಇವರಿಗೆ ನಮಸ್ಕಾರ ಹೇಳಿ ಸಲಾಂ ಹೊಡೆಯಬೇಕು. ರಿಷಬ್ ಶೆಟ್ಟಿ ಕೂಡ ಪುನೀತ್ ರಾಜ್ಕುಮಾರ್ ಅವರಿಗೆ ಈ ಪಾತ್ರವನ್ನು ನೀಡಿದ್ದೆ ಅಂತ ಹೇಳಬೇಕಾಯಿತು ಎಂದು ಹೇಳಿದ್ದಾರೆ.
ಇನ್ನು ಮುಂದುವರೆದ ಅವರ ಟ್ವೀಟ್, ನಿಜವಾಗಿ ಹೇಳಿ, ಪುನೀತ್ಗೆ ಈ ಪಾತ್ರ ಮಾಡಲು ಸಾಧ್ಯವಾಗುತ್ತಿತ್ತಾ..? ರಿಷಬ್ ಅವರ ಆ ಮೂಲದವರೇ. ದೈವಾರಾಧನೆ ಮತ್ತು ಭೂತಕೋಲದ ಬಗ್ಗೆ ರಿಷಬ್ ಗೆ ಗೊತ್ತಿದೆ. ಹಾಗಾಗಿಯೇ ಅವರು ದೈವಿ ನಟನೆ ಮಾಡಲು ಸಾಧ್ಯವಾಯ್ತು ಎಂದಿದ್ದಾರೆ. ಇನ್ನು ಪುನೀತ್ ಅವರ ಸಾವಿಗೂ ಸಂತಾಪ ಸೂಚಿಸಿದ್ದಾರೆ ಜ್ಯೋತಿ. ಮತ್ತೊಂದು ವಿಚಾರ ಅಂದರೆ ಜ್ಯೋತಿ ಅವರ ಟ್ವಿಟರ್ ಖಾತೆಯನ್ನು ನರೇಂದ್ರ ಮೋದಿ, ಸಿ.ಟಿ. ರವಿ ಮುಂತಾದ ಮುಖಂಡರು ಕೂಡ ಫಾಲೋ ಮಾಡುತ್ತಿದ್ದಾರೆ. ಜ್ಯೋತಿ ಅವರ ಟ್ವೀಟ್ ಗೆ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.