ವೈ.ಎಸ್.ವಿ. ದತ್ತ, ಜೆಡಿಎಸ್ ವರಿಷ್ಠ ದೇವೇಗೌಡರ ಆಪ್ತ ಬಳಗದಲ್ಲಿ ಪ್ರಮುಖರು. ಅವರು ಜೆಡಿಎಸ್ ತೊರೆದು ಅನ್ಯ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಬಹಳಷ್ಟು ಬಾರಿ ಕೇಳಿಬಂದಿದ್ದರೂ ಸಹ ದತ್ತ ಅದನ್ನು ನಿರಾಕರಿಸುತ್ತಲೇ ಬಂದಿದ್ದರು. ಇದೀಗ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅವರು ಮಾತನಾಡಿರುವ ಹಳೆ ಆಡಿಯೋ ಒಂದು ವೈರಲ್ ಆಗಿದೆ.
ವ್ಯಕ್ತಿಯೊಬ್ಬರೊಂದಿಗೆ ಮಾತನಾಡುವ ಸಂದರ್ಭದಲ್ಲಿ ವೈ.ಎಸ್.ವಿ. ದತ್ತ, ತಾವು ಕಾಂಗ್ರೆಸ್ ಸೇರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಸಿದ್ದರಾಮಣ್ಣ ನಿಮಗೆಲ್ಲಾ ಅನುಕೂಲ ಮಾಡಿಕೊಡುತ್ತೇವೆ….. ಮಂತ್ರಿ ಮಾಡ್ತೀವಿ…… ಬನ್ನಿ ಅಂತಿದ್ದಾರೆ ಎಂದು ವೈ.ಎಸ್.ವಿ. ದತ್ತ ಹೇಳಿಕೊಂಡಿದ್ದಾರೆ.
ಈಗಾಗಲೇ ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಸೇರಿದಂತೆ ಹಲವರು ಪಕ್ಷವನ್ನು ತೊರೆದಿದ್ದು, ಅನ್ಯ ಪಕ್ಷಗಳಿಗೆ ಸೇರಿಕೊಂಡಿದ್ದಾರೆ. ಇದೀಗ ವೈ.ಎಸ್.ವಿ. ದತ್ತ ಅವರ ಆಡಿಯೋ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಅವರು ಕೂಡಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.