ಈಶ್ವರಪ್ಪ ಹೇಳಿಕೆ ಖಂಡಿಸಿ ರಾಷ್ಟ್ರಧ್ವಜ ಹಿಡಿದು ಸದನದ ಒಳಗಡೆಯೇ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ರಾಜಕೀಯ ಪ್ರತಿಭಟನೆಗಾಗಿ ರಾಷ್ಟ್ರಧ್ವಜ ಬಳಸುವುದು ಸರಿಯಲ್ಲ ಎಂದು ಸಿಎಂ ಕಿಡಿ ಕಾರಿದ್ದಾರೆ.
ರಾಷ್ಟ್ರಧ್ವಜವನ್ನ ಬಳಸುವುದಕ್ಕೆ ಒಂದು ಕೋಡ್ ಇದೆ. ನಿರ್ದಿಷ್ಟ ಸಮಯದಲ್ಲಿ ಬಳಸಬೇಕು ಎನ್ನುವ ನಿಯಮವಿದೆ. ಅಂತಾ ಧ್ವಜವನ್ನು ಪ್ರತಿಭಟನೆಗೆ ಬಳಸುವುದು ಒಂದು ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ.
ಈಶ್ವರಪ್ಪನವರು ಕೆಂಪುಕೋಟೆಯಲ್ಲಿ ಭಗವಾ ಧ್ವಜವನ್ನು ಹಾರಿಸುತ್ತೇವೆ ಎಂದು ಹೇಳಿದ್ದರು, ಅವರು ಇಂದೇ ಹಾರಿಸುತ್ತೇವೆ ಎಂದಿಲ್ಲಾ. ಮುನ್ನೂರು-ನಾಲ್ಕು ನೂರು ವರ್ಷಗಳ ನಂತರ ಹಾರಿಸಬಹುದು ಎಂದಿದ್ದಾರೆ. ಅದು ಕಾನೂನಾತ್ಮಕವಾಗಿ ತಪ್ಪಲ್ಲ, ಆದರೆ ಕಾಂಗ್ರೆಸ್ ಇಂದು ನಡೆದುಕೊಂಡಿರುವ ರೀತಿ ತಪ್ಪು ಎಂದಿದ್ದಾರೆ.