
ಕೇರಳದ ವಯನಾಡುವಿನ ಹೋಟೆಲ್ ಒಂದಕ್ಕೆ ಹೋಗಿ ಕಾಫಿ ಕುಡಿಯುತ್ತಾ, ಪಕ್ಷದ ಹಿರಿಯ ಮುಖಂಡ ಕೆ.ಸಿ. ವೇಣುಗೋಪಾಲ್ ಅವರ ಜೊತೆ ರಾಹುಲ್ ಗಾಂಧಿ ಮಾತುಕತೆ ನಡೆಸುತ್ತ ಕುಳಿತಿದ್ದರು. ಅದೇ ಸಮಯದಲ್ಲಿ ಅಲ್ಲೇ ಇದ್ದ ವೃದ್ಧೆಯೊಬ್ಬರು ರಾಹುಲ್ ಬಳಿ ಬಂದಿದ್ದಾರೆ. ಅವರಿಗೆ ರಾಹುಲ್ ತಮ್ಮ ತಟ್ಟೆಯಲ್ಲಿರುವ ಆಹಾರವನ್ನ ಕೊಟ್ಟಿದ್ದಾರೆ. ರಾಹುಲ್ ಸರಳತೆ ಹಾಗೂ ಮುಗ್ಧತೆ ನೋಡಿ ಭಾವುಕರಾದ ಆ ಹಿರಿಯ ಜೀವ ರಾಹುಲ್ ಅವರನ್ನ ಮಗುವಿನಂತೆ ತಬ್ಬಿಕೊಂಡು ಹಾರೈಸಿದ್ದಾರೆ.
ಕಾಂಗ್ರೆಸ್ ಈ ವಿಡಿಯೋವನ್ನ ತನ್ನ ಅಧಿಕೃತ ಟ್ವೀಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. ಜೊತೆಗೆ ‘ಇದು ಸ್ಕ್ರಿಪ್ಟೆಡ್ ಅಲ್ಲದೇ ಪರಿಶುದ್ಧವಾದ ಪ್ರೇಮ ಮತ್ತು ಸನ್ಮಾನʼ ಅಂತ ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದೆ. ರಾಹುಲ್‌ಗಾಂಧಿ, ಕೆ.ಸಿ. ವೇಣುಗೋಪಾಲ್ ಅವರಿಗೆ ಈ ವೃದ್ಧೆ ಯಾಕೆ ಇಲ್ಲೇ ಕುಳಿತುಕೊಳ್ಳಬಾರದು ಅಂತ ಹೇಳುತ್ತಿರುವುದನ್ನ ಕೇಳಿಸಿಕೊಳ್ಳಬಹುದಾಗಿದೆ.
ಆಗ ವೇಣುಗೋಪಾಲ್ ತಮ್ಮ ಮುಂದಿರೋ ತಟ್ಟೆಯಿಂದ ತಿಂಡಿಯನ್ನ ತೆಗೆದು ಆ ವೃದ್ಧೆಗೆ ಕೊಟ್ಟಿದ್ದಾರೆ. ಅದನ್ನ ನೋಡಿ ರಾಹುಲ್ ಕೂಡಾ ಹಾಗೆ ಮಾಡುತ್ತಾರೆ. ಆಗ ವೃದ್ಧೆ ಖುಷಿಯಿಂದ ಕಣ್ಣಿರು ಹಾಕುತ್ತಾ ರಾಹುಲ್ ಅವರನ್ನ ಮಗುವಿನಂತೆ ಮುದ್ದಾಡ್ತಾ ಹಾರೈಸುತ್ತಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.