alex Certify ‘ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ ಅನ್ನೋದು ತಿರುಕನ ಕನಸು’ – ಕಂದಾಯ ಸಚಿವ ಆರ್​. ಅಶೋಕ್​ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ ಅನ್ನೋದು ತಿರುಕನ ಕನಸು’ – ಕಂದಾಯ ಸಚಿವ ಆರ್​. ಅಶೋಕ್​ ವ್ಯಂಗ್ಯ

ದೇಶದಲ್ಲಿ ಕಾಂಗ್ರೆಸ್​ ಸಂಪೂರ್ಣ ಧೂಳಿಪಟವಾಗಿದೆ ಎಂದು ಕಂದಾಯ ಸಚಿವ ಆರ್​ .ಅಶೋಕ್​ ಲೇವಡಿ ಮಾಡಿದ್ದಾರೆ. ಎರಡನೇ ದಿನದ ಕಾರ್ಯಕಾರಿಣಿ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ ವಿರುದ್ಧ ಆಕ್ರೋಶ ಹೊರ ಹಾಕಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಸೇರಿದಂತೆ ಕಾಂಗ್ರೆಸ್​ ನಾಯಕರು ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮತಾಂತರ ಕಾಯ್ದೆಯನ್ನು ರದ್ದು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ ಎಂದು ಹೇಳುವುದೇ ಒಂದು ತಿರುಕನ ಕನಸಾಗಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್​ ಪಕ್ಷ ಸಂಪೂರ್ಣ ಧೂಳಿಪಟವಾಗಿದೆ. ಕಾಂಗ್ರೆಸ್​ ಸಂಸ್ಥಾಪನಾ ದಿನ ಅವರ ಪಕ್ಷದ ಬಾವುಟವೇ ಹಾರಲಿಲ್ಲ. ಕಾಂಗ್ರೆಸ್​ನದ್ದು ಹಾರದೇ ಇರುವ ಬಾವುಟ. ಕಾಂಗ್ರೆಸ್​ನವರು ಹಗಲುಗನಸು ಕಾಣೋದನ್ನು ನಿಲ್ಲಿಸಲಿ. ವೀರಶೈವ ಧರ್ಮವನ್ನು ಒಡೆದಿದ್ದ ಕಾಂಗ್ರೆಸ್​ ಪಕ್ಷ ಕಡಿಮೆ ಸೀಟ್​ ಗೆದ್ದಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...