ಬಿಜೆಪಿಯ ಕಾರ್ಯಕಾರಿಣಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗೋಕೆ ಕಾಂಗ್ರೆಸ್ ಬಿಟ್ಟಿಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದರು.
ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, 2016ರಲ್ಲಿ ಈ ಕಾಯ್ದೆಗೆ ಸಿದ್ದರಾಮಯ್ಯ. ಟಿ.ಬಿ. ಜಯಚಂದ್ರ ಸಹಿ ಹಾಕಿದ್ದರು. ಆದರೆ ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.
ಈಗಾಗಲೇ ನಾವು ಚಳಿಗಾಲದ ಅಧಿವೇಶನದಲ್ಲಿ ನಾವು ಪಾಸ್ ಮಾಡಿದ್ದೇವೆ.ಅದನ್ನ ಸಾಧು ಸಂತರು, ಧಾರ್ಮಿಕ ಮುಖಂಡರು ನಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದರು.ಆಸೆ, ಆಮಿಷಕ್ಕೆ ಮತಾಂತರ ಆಗುತ್ತಿದೆ ಅಂತ ಹೇಳಿದ್ರು. ನೀವು ಇಟಲಿಯ ಸೋನಿಯಾ ಗಾಂಧಿ ಮಾತನ್ನು ಕೇಳುವವರು. ನಿಮಗೆ ತಾಕತ್ತಿದ್ದರೆ ಒಂದೇ ಒಂದು ಸಾರಿ ನಾವು ಹಿಂದೂ ಎಂದು ಹೇಳಿ ನೋಡೋಣ. ನಿಮ್ಮ ಪಕ್ಷಕ್ಕೆ ಈಗಾಗಲೇ ಗರ್ಭಪಾತ ಆಗಿದೆ. ಆದರೆ ಅದು ಗಂಡೋ ಹೆಣ್ಣೊ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಸಚಿವ ಸ್ಥಾನದ ವಿಚಾರವಾಗಿಯೂ ಮಾತನಾಡಿದ ಅವರು, ನನಗೆ ಸಚಿವ ಸ್ಥಾನದ ಮೇಲೆ ಆಸೆ ಇಲ್ಲ. ಆದರೆ ಗುಜರಾತ್ ಮಾದರಿಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕು. ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ಸಚಿವರಾದವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯುವಕರು, ಹೊಸ ಮುಖಗಳಿಗೆ ಅವಕಾಶ ನೀಡಲಿ. ಈ ಕುರಿತು ನಾವು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.