ಕೊತ್ತಂಬರಿ ಹಾಗೂ ಜೀರಿಗೆಯನ್ನು ಪ್ರತ್ಯೇಕವಾಗಿ ಹುರಿಯಿರಿ. ನಾಲ್ಕು ಕಾಳು ಕಾಳುಮೆಣಸು, ಲವಂಗ ಹಾಕಿ ಬಿಸಿಮಾಡಿ. ಎಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿ ನಯವಾದ ಪುಡಿ ಮಾಡಿಟ್ಟುಕೊಳ್ಳಿ.
ಪ್ರತಿದಿನ ರಾತ್ರಿ ಈ ಹುಡಿಯನ್ನು ಬಿಸಿನೀರಿಗೆ ಹಾಕಿ ಕುದಿಸಿ ತುಂಡು ಬೆಲ್ಲ ಹಾಕಿ, ಬೇಕಿದ್ದರೆ ಹಾಲು ಸೇರಿಸಿಕೊಂಡು ಕುಡಿಯುವುದರಿಂದ ಹಲವು ರೀತಿಯಲ್ಲಿ ಆರೋಗ್ಯದ ಪ್ರಯೋಜನಗಳಿವೆ. ಅವುಗಳೆಂದರೆ:
ರಾತ್ರಿ ವೇಳೆ ಇದನ್ನು ಸೇವಿಸುವುದರಿಂದ ದೇಹದ ಕಲ್ಮಶಗಳೆಲ್ಲ ಹೊರಹೋಗುತ್ತವೆ. ಆಯುರ್ವೇದದ ಅನುಭವದ ಪ್ರಕಾರ ಇದು ದೇಹ ತೂಕ ಇಳಿಸಲು ಬಯಸುವವರಿಗೆ ಬಹಳ ಉಪಕಾರ ಮಾಡುತ್ತದೆ.
ಬೆಳಗಿನ ವೇಳೆ ಇದನ್ನು ಕುಡಿಯುವುದರಿಂದ ಶೀತ, ನೆಗಡಿ, ಕೆಮ್ಮನ್ನು ನಿವಾರಿಸಿ ಬೆಳಗಿನ ಜಡತ್ವ, ಮೈಕೈ ನೋವು ಮತ್ತು ದಣಿವನ್ನು ನಿವಾರಿಸುತ್ತದೆ.
ರಾತ್ರಿ ಊಟದ ನಂತರ ಕುಡಿದು ಮಲಗಿದರೆ ರಾತ್ರಿ ಊಟ ಚೆನ್ನಾಗಿ ಜೀರ್ಣವಾಗುತ್ತದೆ. ದಿನದ ಕೆಲಸದ ಸುಸ್ತನ್ನು ನಿವಾರಿಸುತ್ತದೆ.
ಎರಡು ಲೋಟ ನೀರನ್ನು ಒಂದು ಲೋಟ ಆಗುವ ತನಕ ಕುದಿಸಿ ಸೇವಿಸಬೇಕು. ಕಾಫಿ ಕುಡಿಯುವ ಬದಲು ಇದನ್ನು ಕುಡಿದರೆ ಬೆಳಗ್ಗೆ ಏಳಲು ಅಲರಾಂ ಬೇಕಾಗುವುದಿಲ್ಲ. ಸಹಜವಾಗಿಯೇ ಎಚ್ಚರವಾಗುತ್ತದೆ.