ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ವ್ಯಾಯಾಮದಿಂದ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯಕರ ದೇಹ ನಮ್ಮದಾಗುತ್ತದೆ. ಆದ್ರೆ ಕೆಲವು ಮಹಿಳೆಯರು ವ್ಯಾಯಾಮ ಮಾಡೋದೇ ಇಲ್ಲ. ಆದ್ರೂ ಆರೋಗ್ಯವಾಗಿ, ಸುಂದರವಾಗಿರ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ.
ನೀವು ವ್ಯಾಯಾಮ ಮಾಡಬೇಕೆಂದೇನೂ ಇಲ್ಲ. ಪ್ರತಿದಿನ ನಿಗಧಿತ ಸಮಯದಲ್ಲಿ ಧ್ಯಾನ ಮಾಡುವುದರಿಂದಲೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಧ್ಯಾನ ಮಾಡುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಒತ್ತಡ ಕಡಿಮೆಯಾಗಿ ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ.
ಕಸೂತಿ ಕೆಲಸ ಮಾಡುವುದರಿಂದಲೂ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಕಸೂತಿ ಮೇಲೆ ಹೆಚ್ಚಿನ ಗಮನ ಹೋಗುವುದರಿಂದ ಉಳಿದ ಚಿಂತೆಗಳು ದೂರವಾಗಿ ಮೆದುಳು ಉತ್ತಮವಾಗಿ ಕೆಲಸ ಮಾಡಲು ಶುರುಮಾಡುತ್ತದೆ.
ಸಾಕುನಾಯಿಗಳ ಜೊತೆ ಆಟವಾಡುವುದು ಕೂಡ ಒಂದು ವ್ಯಾಯಾಮ. ಇದ್ರ ಜೊತೆ ಆಟವಾಡುವುದರಿಂದ ಒಂಟಿತನ ದೂರವಾಗುತ್ತದೆ. ಜೊತೆಗೆ ಮಾನಸಿಕ ಸಂಬಂಧಿ ಖಾಯಿಲೆಗಳು ಬಾಧಿಸುವುದಿಲ್ಲ.
ಯಾರು ಪ್ರತಿದಿನ ಅಡುಗೆ ಮಾಡ್ತಾರೋ ಅವರಿಗೆ ಬೇಗ ಬೊಜ್ಜು ಕಾಣಿಸಿಕೊಳ್ಳುವುದಿಲ್ಲ. ಅಡುಗೆ ಮಾಡುವುದರಿಂದ 130 ಕ್ಯಾಲೋರಿ ಬರ್ನ್ ಆಗುವುದೇ ಇದಕ್ಕೆ ಕಾರಣ.
ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಮಾಡುವುದರಿಂದಲೂ ಅನೇಕ ಪ್ರಯೋಜನಗಳಿವೆ. ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಅನುಭವ ನಿಮ್ಮದಾಗುತ್ತದೆ. ಜೊತೆಗೆ ದೇಹ ಫಿಟ್ ಆಗಿ ಆರೋಗ್ಯವಾಗಿರುತ್ತದೆ. ಪ್ರಯಾಣ ಮಾಡುವುದರಿಂದ ರಕ್ತದೊತ್ತಡ ಸರಿಯಾಗಿರುತ್ತದೆ. ಕ್ಯಾನ್ಸರ್ ಅಪಾಯ ಕೂಡ ಕಡಿಮೆ ಎನ್ನುತ್ತಾರೆ ವೈದ್ಯರು.