ಉಬರ್ ಚಾಲಕರೊಬ್ಬರು ಟಿಕ್‌ಟಾಕ್ ಪ್ರಭಾವಿ ಯುವತಿಯೊಬ್ಬಳಿಗೆ ಸಹಾಯ ಮಾಡಿದ್ದಾರೆ. ಪ್ರತಿಯಾಗಿ ಪ್ರಭಾವಿಗಳು ಚಾಲಕನ ಕುಟುಂಬಕ್ಕೆ ಡಾಲರ್ 240,000 (ರೂ. 1.8 ಕೋಟಿ) ಸಂಗ್ರಹಿಸಿದ್ದಾರೆ.
23 ವರ್ಷದ ಬೆಕ್ಕಾ ಮೂರ್ ಎಂಬುವವರು ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರ ಫೋನ್, ಕ್ರೆಡಿಟ್ ಕಾರ್ಡ್‌ಗಳು ಮತ್ತು ಬಾಡಿಗೆ ಕಾರಿನ ಕೀಗಳನ್ನು ಕಳ್ಳರು ಕದ್ದಿದ್ದರು. ರೌಲ್ ಟೊರೆಸ್ ಎಂದು ಗುರುತಿಸಲಾದ ಉಬರ್ ಡ್ರೈವರ್ ಸಹಾಯ ಮಾಡುವವರೆಗೂ ಬೆಕ್ಕಾ ಸಂಕಷ್ಟದಲ್ಲಿದ್ದರು.
ಕ್ಯಾಬ್ ಡ್ರೈವರ್ ಆ ದಿನ ರಜೆ ತೆಗೆದುಕೊಂಡು ಬೆಕ್ಕಾಳನ್ನು ಸ್ಟಾರ್‌ಬಕ್ಸ್‌ಗೆ ಮತ್ತು ನಂತರ ಪೊಲೀಸ್ ಠಾಣೆಗೆ ಕರೆದೊಯ್ದು ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ಅದೃಷ್ಟವಶಾತ್, ಕಳೆದುಹೋದ ಫೋನ್ ಅನ್ನು ಮರುಪಡೆಯಲು ಸಾಧ್ಯವಾಯಿತು. ಅದೃಷ್ಟವಶಾತ್ ಬೆಕ್ಕಾ ಅವರ ಕ್ರೆಡಿಟ್ ಕಾರ್ಡ್ ಕೂಡ ಸಿಕ್ಕಿತು.
ರೌಲ್ ಸಹಾಯ ಮಾಡಿದ್ದಕ್ಕೆ ಸಂತೋಷಗೊಂಡ ಬೆಕ್ಕಾ ಅವರಿಗಾಗಿ ಭೋಜನಕೂಟ ಏರ್ಪಡಿಸಿದ್ದಾರೆ. ಪರಸ್ಪರ ಕುಶಾಲೋಪರಿ ವಿಚಾರಿಸುತ್ತಿದ್ದ ವೇಳೆ ರೌಲ್ ಮಗಳಿಗೆ ಕ್ಯಾನ್ಸರ್ ಇರುವುದು ಬೆಕ್ಕಾಗೆ ತಿಳಿದಿದೆ.
ಬೆಕ್ಕಾ ತನ್ನ ಟಿಕ್‌ಟಾಕ್ ಅನುಯಾಯಿಗಳೊಂದಿಗೆ ರೌಲ್‌ನ ಸಹಾಯ ಮಾಡುವ ಗುಣವನ್ನು ಹಂಚಿಕೊಂಡಿದ್ದಾಳೆ. ಕ್ಯಾಬ್ ಡ್ರೈವರ್‌ಗಾಗಿ ಏನಾದರೂ ಸಹಾಯ ಮಾಡಲೇಬೇಕು ಎಂದು ನಿರ್ಧರಿಸಿದ ಆರೆ ಗೋಫಂಡ್ಮಿ ಅನ್ನು ಪ್ರಾರಂಭಿಸಿ, ತನ್ನ ಟಿಕ್ ಟಾಕ್ ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಿಧಿಸಂಗ್ರಹಣೆಯು ಈಗಾಗಲೇ ಡಾಲರ್ 2,45,000 ಸಂಗ್ರಹವಾಗಿದ್ದು, ಮತ್ತಷ್ಟು ಸೇರಿಕೊಳ್ಳುತ್ತಿದೆ.