alex Certify ಕಷ್ಟದಿಂದ ಪಾರಾಗಿ ನೆಮ್ಮದಿಯಿಂದಿರಲು ಇದುವೇ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಷ್ಟದಿಂದ ಪಾರಾಗಿ ನೆಮ್ಮದಿಯಿಂದಿರಲು ಇದುವೇ ಸುಲಭ ವಿಧಾನ

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಇಷ್ಟೆನಾ ಅನ್ನಿಸುವುದು ಸಹಜ. ಇಲ್ಲದಿರುವುದರ ಕಡೆಗೆ ಮನುಷ್ಯನ ಮನಸ್ಸು ತುಡಿಯುತ್ತದೆ. ಸಾಮಾನ್ಯವಾಗಿ ತೃಪ್ತಿ ಎಂಬುದೇ ಇರಲ್ಲ. ಆದರೆ, ಕೆಲವರು ಹಾಗೇನು ಇರಲ್ಲ. ಇದ್ದುದರಲ್ಲೇ ತೃಪ್ತಿ ಪಡುತ್ತಾರೆ.

ನಮ್ಮ ಇತಿ, ಮಿತಿಗಳನ್ನು ಅರಿತು ಬಾಳುವುದು ಸರಿ ಎನ್ನುವುದು ಕೆಲವರ ಸಲಹೆಯಾದರೆ, ಮತ್ತೆ ಕೆಲವರು ಬಂದಿದ್ದೆಲ್ಲ ಬರಲಿ ಎಲ್ಲವೂ ನನಗಿರಲಿ ಎನ್ನುತ್ತಾರೆ. ಆಸೆ ಮನುಷ್ಯ ಸಹಜ ಗುಣವಾದರೂ ಅತಿ ಆಸೆ ನಮ್ಮ ನೆಮ್ಮದಿಯನ್ನೇ ಕೆಡಿಸುವ ಸಾಧ್ಯತೆ ಇರುತ್ತದೆ.

ಕಷ್ಟದ ದಿನಗಳಲ್ಲಿ ನೆಮ್ಮದಿ ಮರೆಯಾಗುತ್ತದೆ. ಸಂಕಷ್ಟದ ವೇಳೆಯಲ್ಲಿ ನಾವು ನಾವಾಗಿಯೇ ಇರುವುದಿಲ್ಲ. ಇದೆಲ್ಲ ಸಹಜವೆನಿಸಿದರೂ, ನಾವು ಹೇಗಿರಬೇಕೆಂಬುದನ್ನು ನಾವೇ ಅರಿಯಬೇಕಿದೆ.

ಕಷ್ಟದ ಸ್ಥಿತಿ ಎದುರಾದ ಸಂದರ್ಭದಲ್ಲಿ ಆಕಾಶವೇ ಕಳಚಿ ಬಿದ್ದವರಂತೆ ವರ್ತಿಸಿ, ಸಂತೋಷದ ಸಮಯದಲ್ಲಿ ಜಗತ್ತೇ ನನ್ನ ಕೈಯಲ್ಲಿದೆ ಎಂದು ಸಂಭ್ರಮಿಸುವುದು ಸರಿಯಲ್ಲ.

ಆದರೆ, ಬೇಸರ, ಸಂಭ್ರಮಕ್ಕಿಂತ ಮುಖ್ಯವಾದುದು ಸಮಾಧಾನ. ಸುಖ –ದುಃಖಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂತಹ ಕಷ್ಟ, ಸಂತಸದ ಸಂದರ್ಭದಲ್ಲಿಯೂ ವಿಚಲಿತರಾಗಬೇಡಿ.

ನಿರಾಸೆ, ಬೇಸರ ನಿಮ್ಮ ಖುಷಿಯ ಹಾದಿಗೆ ಭಂಗ ತರಬಹುದು. ಕಷ್ಟವಿದ್ದರೂ ಅದನ್ನು ಸಮಾಧಾನದಿಂದ ಶಾಂತಚಿತ್ತರಾಗಿ ಎದುರಿಸಿ. ನಂತರದಲ್ಲಿ ಸಿಗಲಿದೆ ಸಂತಸದ ದಾರಿ. ಕಷ್ಟದಿಂದ ಪಾರಾಗಿ ಸಂತಸದ ದಾರಿ ಕಂಡುಕೊಳ್ಳಲು ಸಮಾಧಾನವೇ ಸುಲಭ ವಿಧಾನ ಎನ್ನುತ್ತಾರೆ ಬಲ್ಲವರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...