ಬಿಳಿ ಎಕ್ಕದ ಗಿಡಕ್ಕೆ ಬಹಳ ಮಹತ್ವದ ಸ್ಥಾನವಿದೆ. ಇದರಲ್ಲಿ ಔಷಧೀಯ ಗುಣಗಳಿವೆ, ಇದನ್ನು ದೇವರ ಪೂಜೆಗೆ ಕೂಡ ಬಳಸುತ್ತಾರೆ. ಈ ಗಿಡವನ್ನು ಪೂಜಿಸುವುದರಿಂದ ಹಲವು ಶುಭ ಫಲಗಳನ್ನು ಕಾಣಬಹುದು. ಹಾಗಾಗಿ ಸಂಕಷ್ಟಹರ ಚತುರ್ಥಿ ಮರುದಿನದಿಂದ 3 ದಿನಗಳ ಕಾಲ ಎಕ್ಕೆ ಗಿಡಕ್ಕೆ ಹೀಗೆ ಪೂಜೆ ಮಾಡಿದರೆ ನಿಮ್ಮ ಕಷ್ಟಗಳು ತೊಲಗಿಹೋಗುತ್ತದೆ.
ಎಕ್ಕದ ಗಿಡದಲ್ಲಿ ಗಣಪತಿ ವಾಸವಾಗಿರುತ್ತಾನೆ ಎಂದು ಹಿಂದೂಪುರಾಣಗಳಲ್ಲಿ ತಿಳಿಸಲಾಗಿದೆ. ಹಾಗಾಗಿ ಈ ಗಿಡವನ್ನು ಈ ರೀತಿ ಪೂಜಿಸಿದರೆ ಜೀವನದಲ್ಲಿ ಎದುರಾದ ಕಷ್ಟಗಳು ತೊಲಗಿಹೋಗುತ್ತದೆ. ಬಿಳಿ ಎಕ್ಕದ ಗಿಡವನ್ನು ಸೂರ್ಯ ಹುಟ್ಟುವ ಮುನ್ನ 3 ದಿನಗಳ ಕಾಲ ಪೂಜಿಸಿ. ಬೆಳಿಗ್ಗೆ 4 ಗಂಟೆಯಿಂದ 6 ಗಂಟೆಯೊಳಗೆ ಅರಶಿನದಿಂದ ಅಕ್ಷತೆ ತಯಾರಿಸಿ, ಅರಶಿನ ಬಣ್ಣದ ಹೂಗಳನ್ನು ತಂದಿಟ್ಟುಕೊಳ್ಳಿ. ಮೊದಲಿಗೆ ಗಿಡಕ್ಕೆ ನೀರನ್ನು ಹಾಕಿ ಅದಕ್ಕೆ ಅರಶಿನ ಕುಂಕುಮ ಹಚ್ಚಿ ಹೂವನ್ನು ಹಾಕಿ ಅಕ್ಷತೆ ಕಾಳನ್ನು ಹಾಕಿ ಸಂಕಲ್ಪ ಮಾಡಿಕೊಳ್ಳಿ.
ಬಳಿಕ ಉಳಿದಂತಹ ಅಕ್ಷತೆ ಕಾಳುಗಳನ್ನು ಬಟ್ಟೆಯಲ್ಲಿ ಕಟ್ಟಿ ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ಇದನ್ನು ಸಂಕಷ್ಟಹರ ಚತುರ್ಥಿ ದಿನದ ಮರುದಿನದಿಂದ ಪ್ರಾರಂಭಿಸಿ 3 , 5, 9, 21 ದಿನ ಮಾಡಬಹುದು. ಇದರಿಂದ ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ದೊರೆಯುತ್ತದೆ.