
ವೃದ್ಧೆಯು ಕಿರಾಣಿ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಚೆಕ್‌ಔಟ್ ಲೈನ್‌ನಲ್ಲಿ ಕಳ್ಳನೊಬ್ಬ ಆಕೆಯ ಪರ್ಸ್ ಅನ್ನು ಕಿತ್ತುಕೊಂಡು ಓಡಿದ್ದಾನೆ. ಆಕೆ ಸಹಾಯಕ್ಕಾಗಿ ಕೂಗುತ್ತಿದ್ದಾಗ, 27 ವರ್ಷದ ದೇಶಾನ್ ಪ್ರೆಸ್ಲಿ ಕೂಡಲೇ ಕಳ್ಳನನ್ನು ಬೆನ್ನಟ್ಟಿದ್ದಾನೆ. ಪಾರ್ಕಿಂಗ್ ಪ್ರದೇಶದಲ್ಲಿ ಕಳ್ಳನನ್ನು ಹಿಡಿದು ಸರಿಯಾಗಿ ಒದೆ ಕೊಟ್ಟಿದ್ದಾನೆ. ಈ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳ್ಳನನ್ನು ನೆಲಕ್ಕೆ ಕೆಡವಿ, ಆತನಿಂದ ವೃದ್ಧೆಯ ಪರ್ಸ್ ಅನ್ನು ಪಡೆದುಕೊಂಡಿದ್ದಾನೆ. ಘಟನೆಯನ್ನು ನೋಡಲು ಜನರು ಹೊರಗೆ ಧಾವಿಸಿದ್ದಾರೆ. ನಂತರ ಪರ್ಸ್ ಅನ್ನು ವೃದ್ಧೆಗೆ ಹಸ್ತಾಂತರಿಸಿದ್ದಾನೆ.
ಯುವಕ ದೇಶಾನ್ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬಟ್ಲರ್ ಕೌಂಟಿ ಶೆರಿಫ್‌ನ ಕಛೇರಿಯು ದೇಶಾನ್ ಪ್ರೀಸ್ಲಿಗೆ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬಟ್ಲರ್ ಕೌಂಟಿ ಶೆರಿಫ್ ಕಚೇರಿಯ ಅಧಿಕೃತ ಫೇಸ್‌ಬುಕ್ ಖಾತೆಯು ದೇಶಾನ್‌ಗೆ ಪ್ರಶಸ್ತಿಯನ್ನು ಹಸ್ತಾಂತರಿಸುವ ಚಿತ್ರಗಳನ್ನು ಹಂಚಿಕೊಂಡಿದೆ.