
ಹೌದು, ಅಸ್ಸಾಂನ ಸಾಮ್ರಾಟ್ ನಾಥ್ ಎಂಬ ಯುವಕ ಇ-ಬೈಕ್ ಅನ್ನು ಕಂಡುಹಿಡಿದ್ದಾನೆ. ಈತ ಕಳ್ಳತನ ಮಾಡಲಾಗದ ಬೈಕ್ ಅನ್ನು ವಿನ್ಯಾಸಗೊಳಿಸಿದ್ದಾನೆ. ಇ-ಬೈಕ್‌ನ ಚಿತ್ರಗಳು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಕರೀಮ್‌ಗಂಜ್ ನಿವಾಸಿಯಾಗಿರುವ ಸಾಮ್ರಾಟ್, ಬೈಕ್ ಅನ್ನು ವಿನ್ಯಾಸಗೊಳಿಸಿದ್ದು, ಅದು ಕಳ್ಳತನವಾದರೆ ಸಾಮ್ರಾಟ್ ಫೋನ್‌ಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ. ಯಾರಾದರೂ ಅದನ್ನು ಕದಿಯಲು ಪ್ರಯತ್ನಿಸಿದರೆ ಫೋನ್‌ಗೆ ಸಂದೇಶ ಬರುತ್ತದೆ ಮತ್ತು ಅಲಾರಾಂ ಅನ್ನು ಸಕ್ರಿಯಗೊಳಿಸಲಾಗುತ್ತದೆ. ಈ ಬೈಕ್ ಅನ್ನು ನಿಯಂತ್ರಿಸಲು ತಾನು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದೇನೆ. ಪ್ರಪಂಚದ ಎಲ್ಲಿಂದಲಾದರೂ ಇದನ್ನು ನಿಯಂತ್ರಿಸಬಹುದು ಎಂದು ಅವರು ಹೇಳಿದ್ದಾರೆ.
ಇಂಟರ್ನೆಟ್ ನಲ್ಲಿ ಪೋಸ್ಟ್ ಹೆಚ್ಚು ಗಮನ ಸೆಳೆದಿದ್ದರೂ, ನೆಟ್ಟಿಗರು ಬೈಕ್‌ನ ವೈಶಿಷ್ಟ್ಯಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹೊಂದಿದ್ದರು. ಕೆಲವರು ಅಲರ್ಟ್ ಸಿಸ್ಟಂ ಬಗ್ಗೆ ವಿಚಾರಿಸಿದ್ರೆ, ಇನ್ನು ಕೆಲವರು ಬೈಕ್ ಕಳ್ಳತನವಾದರೆ ಅದನ್ನು ಹೇಗೆ ಹಿಂಪಡೆಯುತ್ತಾರೆ ಎಂಬ ಬಗ್ಗೆ ಖಚಿತತೆ ಇರಲಿಲ್ಲ. ಆದರೆ, ಸಾಮ್ರಾಟ್ ಅವರ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.