ಯುವಕನೊಬ್ಬನ ಮೇಲೆ ಕಳ್ಳತನ ಮಾಡಿರುವ ಶಂಕೆ ವ್ಯಕ್ತಪಡಿಸಿದ ಮತ್ತಿಬ್ಬರು ಯುವಕರು ಆತನನ್ನು ವಿವಸ್ತ್ರಗೊಳಿಸಿ, ಥಳಿಸಿರುವ ಘಟನೆ ನಡೆದಿದೆ. ಈ ಕೃತ್ಯ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಫೆಬ್ರವರಿ 4 ರಂದು ನಡೆದಿದೆ ಎಂದು ವರದಿಯಾಗಿದೆ. ಅಲ್ಲದೇ ಯುವಕನಿಗೆ ಥಳಿಸಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಮಧ್ಯಪ್ರದೇಶದ ಗುನಾ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್‌ಪುರ ಗ್ರಾಮದಲ್ಲಿ ಅರವಿಂದ್ ಕಲಾವತ್ ಎಂಬ ಯುವಕ ಮೊಬೈಲ್ ಫೋನ್ ಕದ್ದಿದ್ದಾನೆ ಎಂದು ಹೆಟ್ರಾಮ್ ಮತ್ತು ಗೋಲು ಎಂಬ ಇಬ್ಬರು ಆರೋಪಿಗಳು ಆರೋಪಿಸಿದ್ದರು. ಅವರು ಅರವಿಂದ್ ಅವರನ್ನು ತಮ್ಮ ತೋಟದ ಮನೆಗೆ ಕರೆದೊಯ್ದು ಆತನನ್ನು ವಿವಸ್ತ್ರಗೊಳಿಸಿದ್ದಾರೆ. ನಂತರ ಅವರಿಬ್ಬರು ಸುಡುವ ಕೋಲಿನಿಂದ ಅರವಿಂದ್ ಅವರನ್ನು ಥಳಿಸಿದರು, ಈ ಎಲ್ಲಾ ಘಟನೆಯನ್ನು ಅವರೇ ಚಿತ್ರೀಕರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಜಾಬ್ ಧರಿಸದ ಹೆಣ್ಣುಮಕ್ಕಳ ಕೊಲೆಯಾಗುತ್ತಿದೆ; ನಿಜವಾದ ಸಮಸ್ಯೆಗಳ ಬಗ್ಗೆ ಒಂದು ಪದ ಹೇಳದ ಮಲಾಲಾ ಸಹ ಮೂಲಭೂತವಾದಿಯೆ ಎಂದು ಬಿಜೆಪಿ ಕಿಡಿ….!
ಈ ಕ್ಲಿಪ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ವರದಿಯಾದ ನಂತರ, ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವ ಶಿಕ್ಷೆ) ಮತ್ತು SC/ST (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು) ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಶೀಘ್ರದಲ್ಲೇ, ಆರೋಪಿ ಹೆಟ್ರಾಮ್‌ನನ್ನು ಬಂಧಿಸಲಾಯಿತು, ಆದರೆ ಅವನ ಸಹಚರ ಗೋಲು ಇನ್ನೂ ತಲೆಮರೆಸಿಕೊಂಡಿದ್ದಾನೆ.