alex Certify ಕಳೆದ 955 ದಿನಗಳಿಂದ ಕೊಹ್ಲಿ ಬದುಕಲ್ಲಿ ನಡೀತಿದೆ ಇಂಥಾ ಘಟನೆ, ಅಭಿಮಾನಿಗಳಲ್ಲಿ ಶುರುವಾಗಿದೆ ಆತಂಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳೆದ 955 ದಿನಗಳಿಂದ ಕೊಹ್ಲಿ ಬದುಕಲ್ಲಿ ನಡೀತಿದೆ ಇಂಥಾ ಘಟನೆ, ಅಭಿಮಾನಿಗಳಲ್ಲಿ ಶುರುವಾಗಿದೆ ಆತಂಕ…!

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುವ ಲಕ್ಷಣಗಳೇ ಕಾಣ್ತಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ನಿರಂತರವಾಗಿ ಸೋಲು ಕಾಣ್ತಿದ್ದಾರೆ. ಒಂದು ಕಾಲದಲ್ಲಿ ಕೊಹ್ಲಿ ಬ್ಯಾಟ್‌ ಬೀಸಿದ್ರೆ ಶತಕ ಗ್ಯಾರಂಟಿ ಎಂಬ ನಂಬಿಕೆ ಇತ್ತು. ಆದ್ರೀಗ ಕೊಹ್ಲಿ ರನ್‌ ಗಳಿಸಲು ಪರದಾಡ್ತಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಪಂದ್ಯದಲ್ಲಾದ್ರೂ ಕೊಹ್ಲಿ ಚೆನ್ನಾಗಿ ಆಡಬಹುದು ಎಂಬ ನಿರೀಕ್ಷೆ ಅಭಿಮಾನಿಗಳಿಗಿತ್ತು. ಆದ್ರೆ ವಿರಾಟ್‌ ಬ್ಯಾಟ್‌ನಿಂದ ದೊಡ್ಡ ಇನ್ನಿಂಗ್ಸ್‌ ಬರಲೇ ಇಲ್ಲ. ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದ್ದು, ಕಳೆದ 955 ದಿನಗಳಿಂದ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸುತ್ತಲೇ ಇದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್‌ನಲ್ಲೂ ಕೊಹ್ಲಿ ಶತಕ ಸಿಡಿಸಲಿಲ್ಲ. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್ ಗಳಿಸಿದ ಕೊಹ್ಲಿ, ಎರಡನೇ ಇನ್ನಿಂಗ್ಸ್‌ನಲ್ಲಿ 20 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದ್ರಿಂದಾಗಿ ಅಭಿಮಾನಿಗಳ ನಿರೀಕ್ಷೆ ಮತ್ತೊಮ್ಮೆ ಭಗ್ನಗೊಂಡಿದೆ.ವಿರಾಟ್ ಕೊಹ್ಲಿ ಶತಕ ಗಳಿಸದೇ 955 ದಿನಗಳು ಕಳೆದಿವೆ. ಎರಡೂವರೆ ವರ್ಷಗಳಿಂದ ಅಭಿಮಾನಿಗಳು ಕೊಹ್ಲಿ ಸೆಂಚುರಿಗಾಗಿಯೇ ಕಾಯುತ್ತಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವಿರಾಟ್ ಒಂದೇ ಒಂದು ಶತಕವನ್ನು ಗಳಿಸಿಲ್ಲ. ವಿರಾಟ್‌ ವೈಫಲ್ಯದಿಂದ ಟೀಂ ಇಂಡಿಯಾ ಅನೇಕ ಸರಣಿಗಳಲ್ಲಿ ಸೋತಿದೆ. 2019ರ ನವೆಂಬರ್‌ 22ರಂದು ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಶತಕ ಗಳಿಸಿದ್ದರು. ಅಂದು 136 ರನ್‌ ಸಿಡಿಸಿದ್ದ ಕೊಹ್ಲಿ, ನಂತರ 64 ಪಂದ್ಯಗಳನ್ನು ಆಡಿದ್ದಾರೆ. 24 ಅರ್ಧ ಶತಕಗಳೊಂದಿಗೆ 2509 ರನ್ ಗಳಿಸಿದ್ದಾರೆ.

ಆದ್ರೆ ಒಂದೇ ಒಂದು ಶತಕವನ್ನೂ ಗಳಿಸಿಲ್ಲ. ಕಳೆದ 10 ಟೆಸ್ಟ್‌ ಪಂದ್ಯಗಳಲ್ಲಿ ಕೊಹ್ಲಿ ಸೆಂಚುರಿ ಬಾರಿಸಿಲ್ಲ. ಕೇವಲ 872 ರನ್ ಗಳಿಸಿದ್ದಾರೆ ಮತ್ತು 6 ಬಾರಿ 50ರ ಗಡಿ ದಾಟಿದ್ದಾರೆ. 21 ODIಗಳಲ್ಲಿ 10 ಅರ್ಧಶತಕಗಳೊಂದಿಗೆ 791 ರನ್ ಮತ್ತು 25 T20 ಗಳಲ್ಲಿ 846 ರನ್ ಗಳಿಸಿದ್ದಾರೆ. ಕೊಹ್ಲಿಯ ಪ್ರದರ್ಶನ ಹೀಗೆಯೇ ಮುಂದುವರಿದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆ ಮುರಿಯೋದು ಅನುಮಾನ ಎನ್ನುತ್ತಿದ್ದಾರೆ ಅಭಿಮಾನಿಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...