ಕಣ್ಣಿನ ಅಂದ ಕೂಡ ಕಳೆಗುಂದುತ್ತದೆ. ಕೆಲವೊಮ್ಮೆ ಅಲರ್ಜಿ, ಹಾಗೂ ಅತೀಯಾದ ಉಪ್ಪು ಸೇವನೆಯಿಂದಲೂ ಹೀಗೆ ಆಗುತ್ತದೆ. ಕೆಲವೊಂದು ಟಿಪ್ಸ್ ಗಳ ಮೂಲಕ ಇದನ್ನು ಸರಿ ಮಾಡಿಕೊಳ್ಳಬಹುದು. ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.
* ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕ್ಲೀನ್ ಮಾಡಿ. ನಂತರ ಕತ್ತರಿಸಿಕೊಳ್ಳಿ. ಅದನ್ನು ನಿಮ್ಮ ಕಣ್ಣಿನ ಮೇಲೆ ಇಟ್ಟುಕೊಂಡು 15 ನಿಮಿಷ ಹಾಗೇಯೇ ಮಲಗಿ. ಇದರಿಂದ ಕಣ್ಣಿನ ಕೆಳ ಭಾಗದಲ್ಲಿ ನೀರು ಶೇಖರಣೆಯಾಗುವುದು, ಜೋತು ಬೀಳುವುದನ್ನು ಕಡಿಮೆ ಮಾಡಿಕೊಳ್ಳಬಹುದು.
*ಕಾಲು ಕಪ್ ತಂಪಾದ ಹಾಲು ತೆಗೆದುಕೊಳ್ಳಿ. ಅದಕ್ಕೆ ಹತ್ತಿಯ ಉಂಡೆಯನ್ನು ಅದ್ದಿ ಅದನ್ನು ನಿಮ್ಮ ಕಣ್ಣಿನ ಮೇಲೆ ಇಟ್ಟು ಅರ್ಧ ಗಂಟೆ ಮಲಗಿ. ಹೀಗೆ ಮಾಡುವುದರಿಂದ ಕಣ್ಣಿನ ಕೆಳಭಾಗದಲ್ಲಿರುವ ಈ ಸಮಸ್ಯೆ ನಿವಾರಣೆಯಾಗುತ್ತದೆ.
* ಇನ್ನು ವಿಟಮಿನ್ ಇ ಮಾತ್ರೆ ಕೂಡ ಕಣ್ಣಿನ ಸಮಸ್ಯೆಗೆ ಅದ್ಭುತವಾದ ಮದ್ದಾಗಿದೆ. 1 ಬೌಲ್ ತಣ್ಣಗಿನ ನೀರಿಗೆ ಸ್ವಲ್ಪ ವಿಟಮಿನ್ ಇ ಆಯಿಲ್ ಅನ್ನು ಮಿಕ್ಸ್ ಮಾಡಿ. ಅದಕ್ಕೆ ಹತ್ತಿಯ ಉಂಡೆಯನ್ನು ಅದ್ದಿ. ಇದನ್ನು ನಿಮ್ಮ ಕಣ್ಣಿನ ಮೇಲೆ ಅರ್ಧ ಗಂಟೆ ಇಟ್ಟು ಮಲಗಿದರೆ ಕ್ರಮೇಣ ಕಡಿಮೆಯಾಗುತ್ತದೆ. ಕಣ್ಣು ಸಹಜ ಸ್ಥಿತಿಗೆ ಬರುತ್ತದೆ.
*ವಾರಕ್ಕೊಮ್ಮೆ ತಲೆಗೆ ಹರಳೆಣ್ಣೆ ಹಾಕಿ ಮಸಾಜ್ ಮಾಡಿ. ಇದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಕಣ್ಣಿನ ಸಮಸ್ಯೆ ಕೂಡ ದೂರವಾಗುತ್ತದೆ.
ಪೊಟ್ಯಾಷಿಯಂ ಹೇರಳವಾಗಿರುವ ಆಹಾರವನ್ನು ಹೆಚ್ಚು ಸೇವಿಸಿ. ಬಾಳೆಹಣ್ಣು, ಮೊಸರು, ಬೀನ್ಸ್ ಸೊಪ್ಪುಗಳನ್ನು ಹೆಚ್ಚು ಸೇವಿಸಿ.