ಪಾಕಿಸ್ತಾನದ ಪತ್ರಕರ್ತನೊಬ್ಬ ತನ್ನ ಈ ಹಿಂದಿನ ಭಾರತ ಭೇಟಿಗಳ ಬಗ್ಗೆ ಶಾಕಿಂಗ್ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪತ್ರಕರ್ತ ನುಸ್ರತ್ ಮಿರ್ಜಾ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐಗೆ ತಾನು ಯಾವ ರೀತಿ ಭಾರತದ ಕುರಿತ ಮಾಹಿತಿಗಳನ್ನು ರವಾನಿಸುತ್ತಿದ್ದೆ ಎಂಬುದನ್ನು ಬಾಯ್ಬಿಟ್ಟಿದ್ದಾನೆ. ತಾನು ಯಾವ ರೀತಿ ಮಾಹಿತಿಗಳನ್ನು ಸಂಗ್ರಹಿಸ್ತಾ ಇದ್ದೆ ಅನ್ನೋದನ್ನು ವಿವರವಾಗಿ ಹೇಳಿದ್ದಾನೆ.
2007 ರಿಂದ 2017ರವರೆಗೆ ಭಾರತದ ಉಪ ಪ್ರಧಾನಿಯಾಗಿದ್ದ ಮೊಹಮ್ಮದ್ ಹಮೀದ್ ಅನ್ಸಾರಿ, ಈ ಪತ್ರಕರ್ತನನ್ನು ಭಾರತಕ್ಕೆ ಆಹ್ವಾನಿಸುತ್ತಿದ್ದರಂತೆ. ಪಾಕಿಸ್ತಾನದ ವಿದೇಶಾಂಗ ಇಲಾಖೆ ಕೂಡ ಮಿರ್ಜಾನ ಬೆನ್ನಿಗಿರುತ್ತಿತ್ತು. ವೀಸಾಕ್ಕೆ ಅರ್ಜಿ ಹಾಕಿದಾಗ ನಿಯಮದ ಪ್ರಕಾರ 3 ಸ್ಥಳಗಳಿಗೆ ಮಾತ್ರ ಭೇಟಿಯಾಗಲು ಅವಕಾಶ ನೀಡಲಾಗುತ್ತದೆ.
ಆದ್ರೆ ಆ ಸಮಯದಲ್ಲಿ ಪಾಕ್ ವಿದೇಶಾಂಗ ಸಚಿವರಾಗಿದ್ದ ಖುರ್ಷಿದ್ ಕಸುರಿ ಈ ಪತ್ರಕರ್ತನಿಗೆ 7 ಸ್ಥಳಗಳಿಗೆ ವಿಸಿಟ್ ಮಾಡಲು ಅವಕಾಶ ಕೊಡುತ್ತಿದ್ದರಂತೆ. ಈ ಪಾಕ್ ಪತ್ರಕರ್ತ ಐದು ಬಾರಿ ಭಾರತಕ್ಕೆ ಬಂದಿದ್ದಾನಂತೆ. ದೆಹಲಿ, ಬೆಂಗಳೂರು, ಪಾಟ್ನಾ, ಚೆನ್ನೈ, ಕೋಲ್ಕತ್ತಾ ಎಲ್ಲಾ ಕಡೆ ಸುತ್ತಾಡಿದ್ದಾನೆ.
2010ರಲ್ಲಿ ಭಾರತಕ್ಕೆ ಬಂದಾಗ ಈ ಪತ್ರಕರ್ತ ಮಿಲ್ಲಿ ಗೆಜೆಟ್ನ ಪಬ್ಲಿಷರ್ ಜಫಾರುಲ್ ಇಸ್ಲಾಂ ಖಾನ್ರನ್ನು ಭೇಟಿ ಮಾಡಿದ್ದ. ಈ ವೇಳೆ ಪಾಕಿಸ್ತಾನದ ಐಎಸ್ಐಗೆ ಅವರ ಕುರಿತ ಮಾಹಿತಿಗಳನ್ನೆಲ್ಲ ರವಾನಿಸಿದ್ದಾನಂತೆ.