![](https://kannadadunia.com/wp-content/uploads/2023/02/5c3438b9-32f0-4e85-bc89-cd51dfce4417.jpg)
ಉಪ್ಪಿಗಿಂತ ರುಚಿ ಬೇರೆ ಇಲ್ಲ. ಹುಳಿ, ಖಾರ ಇಲ್ಲದ ಅಡುಗೆ ತಿನ್ನಬಹುದು ಆದರೆ ಉಪ್ಪಿಲ್ಲದ ಅಡುಗೆ ಖಂಡಿತಾ ತಿನ್ನೋಕೆ ಯಾರಿಂದಲೂ ಸಾಧ್ಯವಿಲ್ಲ. ಉಪ್ಪಿಗಿರೋ ಮಹತ್ವ ಅಂಥದ್ದು.
ಉಪ್ಪು ಅಂದ ಕೂಡಲೇ ಈಗ ನಮ್ಮ ಮುಂದೆ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಬಗೆಯ ಉಪ್ಪುಗಳು ಕಣ್ಮುಂದೆ ಬರತ್ತೆ. ಪಿಂಕ್ ಸಾಲ್ಟ್, ಆಯೊಡೈಸ್ಡ್ ಸಾಲ್ಟ್, ಬ್ಲಾಕ್ ಸಾಲ್ಟ್ ಹೀಗೆ. ಇಷ್ಟೆಲ್ಲಾ ವೆರೈಟಿ, ಬ್ರಾಂಡ್ ಗಳು ಇರೋವಾಗ ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡೋದು ಸಹಜ.
ಉಪ್ಪಿನಲ್ಲಿ ಎಲ್ಲಕ್ಕಿಂತ ಬೆಸ್ಟ್ ಅಂದರೆ ಕಲ್ಲುಪ್ಪು. ಇದು ಅತ್ಯಂತ ಸಹಜವಾಗಿ ಸಿಗುವ ನೈಸರ್ಗಿಕ ಉಪ್ಪು. ಕಲ್ಲುಪ್ಪನ್ನು ಬಳಸುವ ಜನ ಈಗ ಬಹಳ ಕಡಿಮೆ. ಕಲ್ಲುಪ್ಪು ನಿಯಮಿತವಾಗಿ ಬಳಸುವುದರಿಂದ ನಿಮ್ಮ ರಕ್ತದೊತ್ತಡ ಸಮಸ್ಥಿತಿಯಲ್ಲಿ ಇರುತ್ತದೆ.
ಟೇಬಲ್ ಸಾಲ್ಟ್ ಅನ್ನು ನೀವು ಗಮಸಿದರೆ ಅದು ಕಲ್ಲುಪ್ಪಿಗಿಂತ ಹೆಚ್ಚು ಹೊಳಪು ಹಾಗೂ ಅಂಟು ಇಲ್ಲದೆ ಸರಾಗವಾಗಿ ಸುರಿಯಬಹುದಾದ ಗುಣ ಹೊಂದಿರುತ್ತದೆ. ಆದರೆ ಹೀಗೆ ಉಪ್ಪಿಗೆ ಹೊಳಪು ಬರಿಸಲಿಕ್ಕೆ ಹಲವಾರು ತಯಾರಿಕಾ ಘಟಕಗಳು ರಾಸಾಯನಿಕಗಳ ಬಳಕೆಯನ್ನು ಯಥೇಚ್ಛವಾಗಿ ಬಳಸುವುದರಿಂದ ಯಾವುದೇ ಕಾರಣಕ್ಕೂ ಟೇಬಲ್ ಸಾಲ್ಟ್ ಅಂದರೆ ಪುಡಿ ಉಪ್ಪು ಆರೋಗ್ಯಕ್ಕೆ ಒಳ್ಳೆಯದಲ್ಲ.ಆದಷ್ಟು ಕಲ್ಲುಪ್ಪು ಬಳಸಿ ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಿ.