ಬೇಸಿಗೆ ಕಾಲ ಶುರುವಾಗಿಬಿಟ್ಟಿರೋದ್ರಿಂದ ಹಣ್ಣುಗಳಿಗೆ, ಪಾನೀಯಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ನೆತ್ತಿಯ ಮೇಲೆ ಕೆಂಡಕಾರುವ ಸೂರ್ಯನ ತಾಪಮಾನದಿಂದ ರಕ್ಷಿಸಿಕೊಳ್ಳೋಕೆ ಪಾನೀಯಗಳ ಮೊರೆ ಹೋಗುವುದಕ್ಕಿಂತ ಹಣ್ಣಿನ ಮೊರೆ ಹೋಗುವುದು ಆರೋಗ್ಯದ ದೃಷ್ಟಿಯಿಂದಲೂ ಹಿತಕರ.
ಬೇಸಿಗೆ ಕಾಲದಲ್ಲಿ ನೀರಡಿಕೆ ಕಡಿಮೆ ಮಾಡಲು ದೇಹಕ್ಕೆ ಪೋಷಕಾಂಶಗಳನ್ನ ಪಡೆಯಬೇಕು ಅಂದರೆ ಕಲ್ಲಂಗಡಿ ಹಣ್ಣು ಉತ್ತಮ ಆಯ್ಕೆ. ನೀವಿನ್ನೂ ಈ ಹಣ್ಣನ್ನ ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡಿಲ್ಲ ಎಂದಾದರೆ ಈ ಹಣ್ಣಿನ ಲಾಭದ ಬಗ್ಗೆ ಇಲ್ಲಿದೆ ಮಾಹಿತಿ.
ಕಲ್ಲಂಗಡಿ ಹಣ್ಣು ತಿನ್ನುವ ಅನೇಕರು ಬೀಜಗಳನ್ನ ಬಿಸಾಡುವ ಅಭ್ಯಾಸ ಹೊಂದಿದ್ದಾರೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಅಪಾರ ಪ್ರಮಾಣದಲ್ಲಿ ಪೋಷಕಾಂಶ ಅಡಗಿದೆ.
ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಅಪಾರ ಪ್ರಮಾಣದಲ್ಲಿ ಪೋಷಕಾಂಶ ಅಡಗಿರೋದ್ರ ಜೊತೆಯಲ್ಲಿ ಕ್ಯಾಲರಿ ಕೂಡ ಕಡಿಮೆ ಪ್ರಮಾಣದಲ್ಲಿದೆ. ಒಂದು ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಹೆಚ್ಚು ಕಡಿಮೆ 158 ಕ್ಯಾಲೋರಿ ಇದೆ. ಇದೇ ನೀವು ಒಂದು ಪ್ಯಾಕೆಟ್ ಲೇಸ್ನ್ನು ತಿಂದರೆ ದೇಹದಲ್ಲಿ ಹೆಚ್ಚು ಕಡಿಮೆ 160 ಕ್ಯಾಲೋರಿ ಇರುತ್ತೆ. ಒಂದು ಹಣ್ಣಿನಲ್ಲಿ 400ಕ್ಕೂ ಹೆಚ್ಚು ಬೀಜಗಳಿದ್ರೆ ಒಂದು ಪ್ಯಾಕೆಟ್ ಲೇಯ್ಸ್ನಲ್ಲಿ 10 ರಿಂದ 15 ಚಿಪ್ಸ್ ಇರುತ್ತೆ.
ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಅಗಾಧ ಪ್ರಮಾಣದ ಮ್ಯಾಗ್ನಿಷಿಯಂ ಇದೆ. ಒಂದು ಕಲ್ಲಂಗಡಿ ಹಣ್ಣು ಸರಿ ಸುಮಾರು 21 ಗ್ರಾಂ ಮ್ಯಾಗ್ನಿಷಿಯಂ, 0.29 ಮಿಲಿ ಗ್ರಾಂ ಕಬ್ಬಿಣಾಂಶ, ಫಾಲಿಕ್ ಆಸಿಡ್ , ವಿಟಾಮಿನ್ ಬಿ – 9 ಸೇರಿದಂತೆ ವಿವಿಧ ಪೋಷಕಾಂಶ ಅಡಗಿದೆ.