
ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆಯನ್ನು ಪರಿಗಣಿಸಿ ಈಗ ಪ್ರಮುಖ ಆಭರಣ ಬ್ರಾಂಡ್‌ಗಳಲ್ಲಿ ಒಂದಾದ ಕಲ್ಯಾಣ್ ಜುವೆಲರ್ಸ್, ದಕ್ಷಿಣದ ತನ್ನ ಬ್ರಾಂಡ್ ಅಂಬಾಸಿಡರ್ ಎಂದು ನೇಮಕ ಮಾಡಿಕೊಂಡಿದೆ. ಕನ್ನಡ, ತೆಲುಗು ಮತ್ತು ತಮಿಳುನಾಡು ಮಾರುಕಟ್ಟೆಗಳಿಗೆ ರಶ್ಮಿಕಾ ಮಂದಣ್ಣ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ.
ಕಲ್ಯಾಣ್ ಜುವೆಲರ್ಸ್ ಜೊತೆ ಈಗಾಗಲೇ ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್ (ಜಾಗತಿಕ ರಾಯಭಾರಿ), ಕತ್ರಿನಾ ಕೈಫ್ (ರಾಷ್ಟ್ರೀಯ ರಾಯಭಾರಿ), ನಾಗಾರ್ಜುನ (ಆಂಧ್ರ ಮತ್ತು ತೆಲಂಗಾಣ), ಪ್ರಭು (ತಮಿಳುನಾಡು), ಶಿವರಾಜ ಕುಮಾರ್ (ಕರ್ನಾಟಕ) ಮತ್ತು ಕಲ್ಯಾಣಿ ಪ್ರಿಯದರ್ಶನ್ (ಕೇರಳ) ಒಡಂಬಡಿಕೆ ಮಾಡಿಕೊಂಡಿದ್ದು ಈಗ ರಶ್ಮಿಕಾ ಮಂದಣ್ಣ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.