ನಿಮ್ಮ ತ್ವಚೆಯು ಕಳೆಗುಂದಿ, ನೈಸರ್ಗಿಕ ಹೊಳಪನ್ನು ಕಳೆದುಕೊಂಡಿದೆಯೇ? ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ತಾ ಇದ್ಯಾ? ಹಾಗಿದ್ದರೆ ಈ ಎಲ್ಲಾ ಸಮಸ್ಯೆಗಳಿಗೆ ಸೈಸರ್ಗಿಕ ಪರಿಹಾರ ನಿಮ್ಮ ಮನೆಗಳಲ್ಲೆ ಇದೆ. ಅದುವೇ ಅರಿಶಿನ. ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಸುಲಭವಾಗಿ ಸಿಗುವಂತಹದ್ದು. ವಿವಿಧ ರೀತಿಯ ತ್ವಚೆಯ ಸಮಸ್ಯೆಗಳಿಗೆ ಪ್ರಾಚೀನ ಕಾಲದಿಂದಲೂ ಉಪಯೋಗಿಸಲ್ಪಡುತ್ತಿರುವ ಒಂದು ಅತ್ಯುತ್ತಮ ರೆಮಿಡಿ.
ಚರ್ಮದ ಮೇಲಿನ ಗಾಯದ ಕಲೆಗಳಿಗೆ ಪರಿಹಾರ : ಒಂದು ಚಮಚ ಕಡಲೆಹಿಟ್ಟಿನ ಜೊತೆ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ, ಗಾಯವಾಗಿರುವ ಕಡೆ ಹಚ್ಚಿ, 20 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಅರಿಶಿನದಲ್ಲಿರುವ ಆ್ಯಂಟಿ ಇನ್ ಫ್ಲಮೇಟರಿ ಗುಣವು ಚರ್ಮದ ಮೇಲಾಗಿರುವ ಗಾಯದ ಗುಣ ಲಕ್ಷಣಗಳನ್ನು ಕಡಿಮೆ ಮಾಡಿ, ಗಾಯವನ್ನು ವೇಗವಾಗಿ ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ.
ಸೈನ್ಸ್ ಆಫ್ ಏಜಿಂಗ್ : ಒಂದು ಚಮಚ ಅರಿಶನವನ್ನು ಒಂದು ಚಮಚ ಹಾಲಿನ ಕೆನೆಯೊಂದಿಗೆ ಮಿಶ್ರ ಮಾಡಿ ಮುಖಕ್ಕೆ ಲೇಪಿಸಿ, 20 ನಿಮಿಷ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಯಾವುದೇ ಸೋಪ್ ಅನ್ನು ಉಪಯೋಗಿಸದೇ ತೊಳೆದುಕೊಳ್ಳಿ. ಆರಿಶಿಣದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಚರ್ಮದ ಮೇಲಾಗುವ ರಾಡಿಕಲ್ ಡ್ಯಾಮೇಜ್ ಗಳಿಂದ ರಕ್ಷಣೆ ನೀಡಿ, ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಫೈನ್ ಲೈನ್ಸ್, ಡಾರ್ಕ್ ಸರ್ಕಲ್ಸ್ ಮತ್ತು ಸುಕ್ಕುಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ತ್ವಚೆಗೆ ನೈಸರ್ಗಿಕವಾದ ಹೊಳಪನ್ನು ನೀಡುತ್ತದೆ.
ಒಣ ಮತ್ತು ಬಿರುಕು ಹಿಮ್ಮಡಿಗಳಿಗೆ : ಸ್ವಲ್ಪ ತೆಂಗಿನ ಎಣ್ಣೆಯೊಂದಿಗೆ ಕಾಲು ಚಮಚ ಅರಿಶಿನವನ್ನು ಬೆರೆಸಿ ಪೇಸ್ಟ್ ಮಾಡಿಕೊಂಡು, ಒಡೆದ ಹಿಮ್ಮಡಿಗಳಿಗೆ ಲೇಪಿಸಿ. 15 ನಿಮಿಷ ಹಾಗೆಯೇ ಬಿಟ್ಟು, ನಂತರ ಚೆಚ್ಚಗಿನ ನೀರಿನಲ್ಲಿ ತೊಳೆಯಿರಿ. ದಿನನಿತ್ಯ ಹೀಗೆ ಮಾಡುವುದರಿಂದ ಬಿರುಕುಗಳು ಕಡಿಮೆಯಾಗಿ, ಮೃದುವಾದ ಪಾದಗಳು ನಿಮ್ಮದಾಗುತ್ತವೆ.