ಅಯ್ಯಪ್ಪ ಸ್ವಾಮಿ, ಪಂದಳ ರಾಜ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವ ಈ ಸ್ವಾಮಿ ವರ್ಷಕ್ಕೆ ಒಮ್ಮೆ ದರ್ಶನ ನೀಡುತ್ತಾರೆ. ಕೋಟ್ಯಾಂತರ ಭಕ್ತರು ಇವರ ದರ್ಶನಕ್ಕೆ ಕಾದಿರುತ್ತಾರೆ. ಮಹಿಷಿಯನ್ನು ಮಟ್ಟ ಹಾಕಲು ಶಿವ ಮತ್ತು ವಿಷ್ಣುವಿನ ಶಕ್ತಿಗಳೊಂದಿಗೆ ಜನಿಸಿದವರು. ಅವರು ಮಕ್ಕಳಿಲ್ಲದ ರಾಜಮನೆತನದ ದಂಪತಿಗಳಾದ ರಾಜಶೇಖರ ಪಾಂಡಿಯನ್ ಮತ್ತು ಕೋಪರುಂದೇವಿ ಇವರನ್ನು ಬೆಳೆಸಿದರಂತೆ.
ಮತ್ತೊಂದು ಮೂಲದ ಪ್ರಕಾರ, ಅಯ್ಯಪ್ಪನ ಹುಟ್ಟಿನ ಪಂದಳ ಸಾಮ್ರಾಜ್ಯವಿತ್ತು. ರಾಜಮನೆತನಕ್ಕೆ ಮಕ್ಕಳಿರಲಿಲ್ಲವಂತೆ. ಒಂದು ದಿನ ಪಂದಳಂ ರಾಜನಿಗೆ ಕಾಡಿನಲ್ಲಿ ಗಂಡು ಮಗು ಸಿಗುತ್ತದೆ. ಈ ಮಗುವಿನ ಬಗ್ಗೆ ವಿಚಾರಿಸಲು ರಾಜನು ಮಗುವನ್ನು ಕಾಡಿನಲ್ಲಿದ್ದ ತಪಸ್ವಿಯ ಬಳಿಗೆ ಹೋಗುತ್ತಾರೆ. ಈ ವೇಳೆ ತಪಸ್ವಿಯು ಮಗುವನ್ನು ಮನೆಗೆ ಕರೆದುಕೊಂಡು ಹೋಗುವಂತೆ ರಾಜನಿಗೆ ಸಲಹೆ ನೀಡಿದರು. ನಂತರ ಅವನನ್ನು ತನ್ನ ಸ್ವಂತ ಮಗನಂತೆ ಬೆಳೆಸಿ ಆ ಮಗುವಿಗೆ ಮಣಿಕಂಠ ಎಂದು ಹೆಸರಿಟ್ಟರು. ಅಂದಿನಿಂದ ಮಣಿಕಂಠನಾಗಿ ಬೆಳೆದರು ಅಯ್ಯಪ್ಪ.
12 ನೇ ವಯಸ್ಸಿನಲ್ಲಿ ರಾಜನು ಮಣಿಕಂಠನನ್ನು ತನ್ನ ಉತ್ತರಾಧಿಕಾರಿಯಾಗಿ ಘೋಷಣೆ ಮಾಡುತ್ತಾನೆ. ಈ ನಿರ್ಧಾರ ಮಂತ್ರಿಯೊಬ್ಬರಿಗೆ ಇಷ್ಟವಾಗದೆ ರಾಣಿ ತಲೆಗೆ ಬೇಡದೇ ಇರೋದನ್ನ ತುಂಬುತ್ತಾನೆ. ಮಂತ್ರಿಯ ಪ್ರಭಾವಕ್ಕೆ ಒಳಗಾದ ರಾಣಿ ಇದನ್ನು ವಿರೋಧಿಸಿದಳು. ನಿಮ್ಮ ಸ್ವಂತ ಮಗು ಮಾತ್ರ ಮುಂದಿನ ರಾಜನಾಗಬೇಕು ಎಂದು ಮಂತ್ರಿ ರಾಣಿಗೆ ಸಲಹೆ ನೀಡುತ್ತಾನೆ. ಮಂತ್ರಿಯು ರಾಣಿಗೆ ಅನಾರೋಗ್ಯದ ನೆಪ ಹೇಳಲು ಹೇಳುತ್ತಾನೆ. ಅವಳ ಕಾಯಿಲೆಯನ್ನು ಗುಣಪಡಿಸಲು ಹುಲಿಯ ಹಾಲು ಕೇಳಿದನು ಮತ್ತು ಕಾಡಿನಿಂದ ಹಾಲನ್ನು ಪಡೆಯಲು ಮಣಿಕಂಠನನ್ನು ಕಳುಹಿಸಬೇಕೆಂದು ಒತ್ತಾಯಿಸಿದನು. ಮಣಿಕಂಠ ಸ್ವಯಂ ಕಾಡಿಗೆ ಹೋಗಿ ಹುಲಿಯ ಹಾಲು ತರುವ ಬದಲು ಹುಲಿಯ ಮೇಲೆ ಸವಾರಿ ಮಾಡುತ್ತಾ ಹಿಂತಿರುಗುತ್ತಾನೆ. ಆಗ ಮಣಿಕಂಠನ ಶಕ್ತಿ ಗೊತ್ತಾಗುತ್ತದೆ.
ಈ ವೇಳೆ ಅವನ ದೈವಿಕ ಶಕ್ತಿ ಗೊತ್ತಾಗ್ತಾ ಇದ್ದಂತೆ ಮಣಿಕಂಠ ಲೋಕ ಉದ್ದಾರಕ್ಕೆ ಹೋಗಲು ತಂದೆಯ ಬಳಿ ಹೇಳಿಕೊಳ್ಳುತ್ತಾನೆ. ಅಷ್ಟೆ ಅಲ್ಲ ಅವನಿಗೆ ದೇವಾಲಯವನ್ನು ಮಾಡಲು ರಾಜ ನಿರ್ಧರಿಸುತ್ತಾನೆ. ಈ ವೇಳೆ ಮಣಿಕಂಠ ಮೂವತ್ತು ಕಿಲೋಮೀಟರ್ ದೂರದಲ್ಲಿ ಬಾಣ ಬಿಡುತ್ತಾನೆ. ಚಿಕ್ಕ ಹುಡುಗ ಅಯ್ಯಪ್ಪ ಆಗಿ ರೂಪಾಂತರಗೊಳ್ಳುತ್ತಾನೆ. ಬಾಣ ಬಿದ್ದ ಸ್ಥಳದಲ್ಲಿ ದೇವಾಲಯ ಕಟ್ಟಬೇಕು ಎಂದಾಗ ರಾಜ ಇದಕ್ಕೆ ಒಪ್ಪಿಗೆ ಸೂಚಿಸಿ ದೇವಾಲಯ ನಿರ್ಮಾಣ ಆಗುತ್ತದೆ.
ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ ಮತ್ತು ತಪಸ್ವಿಯಾಗಿದ್ದರು. ಅದಕ್ಕಾಗಿಯೇ 10 ರಿಂದ 50 ವರ್ಷ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರು ಆತನ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲಿ ಒಂದು ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ದಟ್ಟ ಕತ್ತಲೆಯಲ್ಲೂ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ. ಈ ಬೆಳಕನ್ನು ನೋಡಿದಾಗಲೆಲ್ಲಾ ಅದರ ಜೊತೆಯಲ್ಲಿ ಶಬ್ದವೂ ಕೇಳಿಸುತ್ತದೆ ಎಂದು ಹೇಳಲಾಗುತ್ತದೆ.