ಕರ್ಪೂರವನ್ನು ನಾವು ಸಾಮಾನ್ಯವಾಗಿ ಆರತಿಗೆ ಬಳಸ್ತೇವೆ. ಕರ್ಪೂರದ ಆರತಿ ಮಂಗಳಕರವೆಂದು ನಂಬಲಾಗಿದೆ. ಇದ್ರ ಪರಿಮಳ ವಾತಾವರಣದಲ್ಲಿ ಸೇರಿ ಮನಸ್ಸಿಗೆ ಶಾಂತಿ ನೀಡುತ್ತದೆ.
ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯದಲ್ಲಿ ಕರ್ಪೂರದ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ಇದ್ರ ಪ್ರಯೋಗದಿಂದ ಮನೆಯಲ್ಲಿ ಶಾಂತಿ ನೆಲೆಸುವ ಜೊತೆಗೆ ಗ್ರಹ ದೋಷ ಕೂಡ ಕಡಿಮೆಯಾಗುತ್ತದೆ.
ಗುಲಾಬಿ ಹೂವಿನ ಮೇಲೆ ಕರ್ಪೂರವನ್ನಿಟ್ಟು ಸಂಜೆ ದುರ್ಗಾ ದೇವಸ್ಥಾನಕ್ಕೆ ಹೋಗಿ ದುರ್ಗೆಗೆ ಅರ್ಪಿಸಿ. ಇದ್ರಿಂದ ಧನ ಪ್ರಾಪ್ತಿಯಾಗುತ್ತದೆ. 43 ದಿನಗಳ ಕಾಲ ಹೀಗೆ ಮಾಡುವುದು ಲಾಭಕರ. ನವರಾತ್ರಿಯಲ್ಲಿ ಇದನ್ನು ಮಾಡಿದ್ರೆ ಹೆಚ್ಚು ಫಲ ಲಭಿಸಲಿದೆ.
ಸ್ನಾನ ಮಾಡುವ ನೀರಿಗೆ ಕರ್ಪೂರದ ತೈಲವನ್ನು ಒಂದು ಹನಿ ಹಾಕಿದ್ರೆ ದೇಹ ಉಲ್ಲಾಸಿತವಾಗಿರುತ್ತದೆ. ಸಾಧ್ಯವಾದ್ರೆ ಮಲ್ಲಿಗೆ ತೈಲವನ್ನು ಬೆರೆಸಬೇಕು. ಹೀಗೆ ಮಾಡಿದಲ್ಲಿ ರಾಹು, ಕೇತು ಹಾಗೂ ಶನಿಯಿಂದ ಮುಕ್ತಿ ಸಿಗುತ್ತದೆ. ಆದ್ರೆ ಶನಿವಾರ ಮಾತ್ರ ಹೀಗೆ ಮಾಡಬೇಕೆಂಬುದು ನೆನಪಿರಲಿ.
ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ನೆಲೆಸಿರಬೇಕೆಂದರೆ ಬೆಳಿಗ್ಗೆ ಹಾಗೂ ರಾತ್ರಿ ತುಪ್ಪದ ದೀಪದ ಜೊತೆ ಕರ್ಪೂರವನ್ನು ಹಚ್ಚಿ.
ಪತಿ-ಪತ್ನಿ ಸಂಬಂಧ ಸುಧಾರಿಸುವ ಕೆಲಸವನ್ನೂ ಕರ್ಪೂರ ಮಾಡುತ್ತದೆ. ಪತಿ-ಪತ್ನಿ ಎರಡು ಕರ್ಪೂರದ ಪುಡಿಯನ್ನು ಹಾಸಿಗೆ ಕೆಳಗೆ ಇಡಬೇಕು. ಬೆಳಿಗ್ಗೆ ಅಜ್ಞಾತ ಸ್ಥಳದಲ್ಲಿ ಕರ್ಪೂರವನ್ನು ಎಸೆದು ಬರಬೇಕು. ಇದ್ರ ಜೊತೆಗೆ ಮಲಗುವ ಕೋಣೆಯಲ್ಲಿ ಕರ್ಪೂರ ಹಚ್ಚುವುದು ಒಳ್ಳೆಯದು. ಇದು ಪತಿ-ಪತ್ನಿ ನಡುವಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಪುರಾತನ ಕಾಲದಿಂದಲೂ ದೇವರ ಮುಂದೆ ಕರ್ಪೂರ ಹಚ್ಚುವ ಸಂಪ್ರದಾಯವಿದೆ. ಬೆಳಿಗ್ಗೆ ಹಾಗೂ ಸಂಜೆ ದೇವರ ಮುಂದೆ ಕರ್ಪೂರ ಹಚ್ಚುವುದ್ರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.
ಮನೆಯಲ್ಲಿ ವಾಸ್ತು ದೋಷವಿದ್ದರೆ ವಾಸ್ತು ದೋಷವಿರುವ ಸ್ಥಳದಲ್ಲಿ ಎರಡು ಕರ್ಪೂರವನ್ನಿಡಿ. ಅದು ಕರಗಿದ ನಂತ್ರ ಹೊಸ ಕರ್ಪೂರವನ್ನು ಇಡಬೇಕು. ಹೀಗೆ ಮಾಡುವುದ್ರಿಂದ ವಾಸ್ತು ದೋಷ ಕಡಿಮೆಯಾಗುತ್ತದೆ.