ಪೂಜೆಗೆ ಬಳಸುವ ಕರ್ಪೂರದಿಂದ ಒಂದಷ್ಟು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಸುಟ್ಟ ಗಾಯಗಳನ್ನು ಗುಣ ಪಡಿಸಲು ಕರ್ಪೂರ ಉಪಯೋಗಿಸಬಹುದು. ತೆಂಗಿನ ಎಣ್ಣೆಯ ಜೊತೆ ಕರ್ಪೂರವನ್ನು ಮಿಕ್ಸ್ ಮಾಡಿ ಸುಟ್ಟ ಗಾಯಗಳ, ಮೊಡವೆ ಕಲೆಗಳ ಮೇಲೆ ಹಚ್ಚಿದರೆ ಕಲೆಗಳು ಕಡಿಮೆಯಾಗುತ್ತದೆ. ತಲೆಯಲ್ಲಿ ಹೊಟ್ಟು ಆದಾಗ ಕೂದಲಿನ ಸಮಸ್ಯೆ ಇದ್ದಾಗ ಕರ್ಪೂರವನ್ನು ನೆನೆಸಿ ಕರ್ಪೂರದ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಕೊಳ್ಳುತ್ತಾ ಇದ್ದರೆ ಹೊಟ್ಟು ಕಡಿಮೆ ಆಗುತ್ತದೆ.
ಚರ್ಮದಲ್ಲಿ ರೆಡ್ನೆಸ್ ಕಾಣಿಸಿಕೊಂಡಾಗ ಕರ್ಪೂರದ ಎಣ್ಣೆ ಹಚ್ಚಿ ಅಥವಾ ಕರ್ಪೂರದ ಮಾತ್ರೆಗಳ ಪೇಸ್ಟ್ ತಯಾರಿಸಿ ಅದನ್ನು ಇನ್ಫೆಕ್ಷನ್ ಮೇಲೆ ಹಚ್ಚಿ ಇದರಿಂದ ಸ್ಕಿನ್ ಅಲರ್ಜಿ ಕಡಿಮೆ ಆಗುತ್ತದೆ. ಸುಟ್ಟ ಗಾಯಗಳಿಂದ ಉರಿ ಕಾಣಿಸಿಕೊಂಡರೆ ಅದನ್ನು ಕಡಿಮೆ ಮಾಡಲು ಕರ್ಪೂರದ ಎಣ್ಣೆಯನ್ನು ಬಳಸಬಹುದು. ಜಾಯಿಂಟ್ ಪೇಯ್ನ್ ಇರುವಲ್ಲಿಗೆ ಕರ್ಪೂರದ ಎಣ್ಣೆಯಿಂದ ಮಸಾಜ್ ಮಾಡಿದರೆ ಜಾಯಿಂಟ್ ನೋವು ಕಡಿಮೆ ಆಗುತ್ತದೆ.
ಬಾಯಿ ಹುಣ್ಣು ಆದಾಗ ಕರ್ಪೂರವನ್ನು ಬಳಸಬಹುದು. ಕರ್ಪೂರದ ಪುಡಿಯನ್ನು ಶುದ್ಧ ತುಪ್ಪದ ಜೊತೆಗೆ ಸೇರಿಸಿ ಬಾಯಿ ಹುಣ್ಣು ಆದಲ್ಲಿ ಹಚ್ಚಿದರೆ ಬಾಯಿ ಹುಣ್ಣಿನ ಸಮಸ್ಯೆ ಕಡಿಮೆ ಆಗುತ್ತದೆ. ಹಲ್ಲು ನೋವಿನ ಸಮಸ್ಯೆ ಇದ್ದಾಗ ಇದನ್ನು ಬಳಸಬಹುದು. ಆದರೆ ನಕಲಿ ಕರ್ಪೂರದ ಬಗ್ಗೆ ಎಚ್ಚರವಿರಲಿ.