ಮಂಗಳೂರು: ಕರ್ನಾಟಕ ಬ್ಯಾಂಕ್ ಗೆ ಸರ್ಕಾರದ ಏಜೆನ್ಸಿ ಬ್ಯಾಂಕ್ ಮನ್ನಣೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ನಿರ್ವಹಣೆಗೆ ಖಾಸಗಿ ವಲಯದ ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್ ಅನ್ನು ಏಜೆನ್ಸಿ ಬ್ಯಾಂಕ್ ಆಗಿ ಮಾನ್ಯತೆ ನೀಡಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರವಾಗಿ ಕರ್ನಾಟಕ ಬ್ಯಾಂಕ್ ಅಧಿಕೃತವಾಗಿ ಆದಾಯ ಸ್ವೀಕೃತಿ, ಪಾವತಿ, ಪಿಂಚಣಿ ಪಾವತಿ, ಮುದ್ರಾಂಕ ಶುಲ್ಕ ಸಂಗ್ರಹ ಮತ್ತು ಆರ್.ಬಿ.ಐ. ನಿರ್ದೇಶನದನ್ವಯ ಪ್ರಮುಖ ವ್ಯವಹಾರ ನಡೆಸಬಹುದಾಗಿದೆ.
ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂ.ಎಸ್. ಮಹಾಬಲೇಶ್ವರ ಈ ಬಗ್ಗೆ ಮಾಹಿತಿ ನೀಡಿ, ಸರ್ಕಾರದ ವ್ಯವಹಾರಗಳನ್ನು ನಿರ್ವಹಿಸಲು ಬ್ಯಾಂಕ್ ಸಶಕ್ತವಾಗಿದೆ ಎಂದು ಹೇಳಿದ್ದಾರೆ.