ಡಿಸೆಂಬರ್ 31ರ ಕರ್ನಾಟಕ ಬಂದ್ ಮುಂದೂಡಿಕೆ ವಿಚಾರ ಕುರಿತಂತೆ ಕನ್ನಡಪರ ಸಂಘಟನೆಗಳ ಒಕ್ಕೂಟಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪತ್ರ ಬರೆದಿದ್ದಾರೆ.
ಕರ್ನಾಟಕ ಬಂದ್ ಮುಂದೂಡುವಂತೆ ಮನವಿ ಮಾಡಿ ಪತ್ರ ಬರೆದಿರುವ ಪ್ರವೀಣ್ ಶೆಟ್ಟಿ, ಬೆಳಗಾವಿ ಕ್ರಿಯಾ ಸಮಿತಿ ಬಂದ್ ಗೆ ಬೆಂಬಲ ನೀಡಿಲ್ಲ, ಒಮಿಕ್ರಾನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ,
‘ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋದು ತಿರುಕನ ಕನಸು’ – ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯ
ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ವರ್ತಕರು, ವಾಣಿಜ್ಯೋದ್ಯಮಿಗಳು, ಹೋಟೆಲ್ ಮಾಲೀಕರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ವರ್ಷದ ಕೊನೆಯ ದಿನ ಆಗಿರೋದ್ರಿಂದ ಒಳ್ಳೆ ವ್ಯವಹಾರದ ನಿರೀಕ್ಷೆಯಲ್ಲಿದ್ದಾರೆ. ಬಂದ್ ಬಗ್ಗೆ ಚಿತ್ರನಟರು, ಉದ್ಯಮಿಗಳು ಕೂಡ ಅಸಮಾಧನ ಹೊರ ಹಾಕಿದ್ದಾರೆ. ಸಾರ್ವಜನಿಕ ವಲಯದಿಂದಲೂ ಬಂದ್ ಗೆ ವಿರೋಧ ವ್ಯಕ್ತವಾಗುತ್ತಿದೆ, ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ಮುಂದೂಡುವುದು ಉತ್ತಮ. ಈ ಬಗ್ಗೆ ಸಭೆ ನಡೆಸಿ ಮತ್ತೊಂದು ದಿನಾಂಕ ನಿಗದಿಗೊಳಿಸೋಣ ಎಂದು ಹೇಳಿ ಬಂದ್ ನಿಂದ ಹಿಂದೆ ಸರಿದಿದ್ದಾರೆ.
ಕರ್ನಾಟಕ್ ಬಂದ್ ಮುಂದೂಡಿಕೆಯಾಗತ್ತಾ..?
ಈ ಪ್ರಶ್ನೆ ಸದ್ಯ ಎಲ್ಲರಲ್ಲೂ ಇದೆ, ಪ್ರವೀಣ್ ಶೆಟ್ಟಿ ಏನೋ ಬಹಿರಂಗ ಪತ್ರ ಬರೆದಿದ್ದಾರೆ. ಆದರೆ ವಿವಿಧ ಕನ್ನಡ ಪರ ಹೋರಾಟಗಾರರು ಬಂದ್ ಮುಂದೂಡುವಂತೆ ವಾಟಾಳ್ ನಾಗರಾಜ್ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಡಿಸೆಂಬರ್ 31ಕ್ಕೆ ಬೇಡ ಬಂದ್ ಬೇಡ ಎರಡ್ಮೂರು ದಿನ ಮುಂದೂಡಿ, ಜನವರಿ ತಿಂಗಳಲ್ಲಿ ಬಂದ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
31ಕ್ಕೆ ಬಂದ್ ಮಾಡಿದ್ರೆ ಯಶಸ್ಸಾಗುವ ಸಾಧ್ಯತೆ ಇಲ್ಲ. ವಿರೋಧ ಪಕ್ಷದಿಂದಲೂ ಬಂದ್ ಗೆ ಸಹಕಾರ ದೊರೆತಿಲ್ಲ ಎಂದು ವಿವಿಧ ಕನ್ನಡ ಪರ ನಾಯಕರುಗಳು ಬಂದ್ ಮುಂದೂಡಲು ನಿರ್ಧರಿಸಿದ್ದಾರೆ. ಬಂದ್ ವಿಫಲವಾದ್ರೆ ಕನ್ನಡ ಹೋರಾಟಗಾರರಿಗೆ ಮುಖಭಂಗವಾಗತ್ತೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನವರಿ ಮೊದಲ ವಾರದಲ್ಲಿ ಬಂದ್ ಮಾಡುವುದು ಸೂಕ್ತ, ಎಂದು ವಾಟಾಳ್ ಮನವೊಲಿಸಲು ಬೆಂಬಲಿಗರು ಹಾಗೂ ಹಲವು ಕನ್ನಡ ಪರ ಹೋರಾಟಗಾರರು ಪ್ರಯತ್ನಿಸುತ್ತಿದ್ದಾರೆ. ಆದ್ರೆ ವಾಟಾಳ್ ಮಾತ್ರ ದಿನಾಂಕ ಬದಲಿಸಲು ಒಪ್ಪುತ್ತಿಲ್ಲ ಎನ್ನಲಾಗಿದೆ.