ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪಿಜಿಸಿಇಟಿ ಫಲಿತಾಂಶಗಳನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಪಿಜಿಸಿಇಟಿ ಪರೀಕ್ಷೆಯು ನವೆಂಬರ್ 11ರಿಂದ ನವೆಂಬರ್ 14ರವರೆಗೆ ನಡೆದಿತ್ತು.
ಪಿಜಿ ಸಿಇಟಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ kea.kar.nic.in ಅಥವಾ cetonline.karnataka.gov.in ನಲ್ಲಿ ನೋಡಬಹುದಾಗಿದೆ.
ಪಿಜಿಸಿಇಟಿ ಪರೀಕ್ಷಾ ಫಲಿತಾಂಶವನ್ನು ವೀಕ್ಷಿಸಲು ಈ ರೀತಿ ಮಾಡಿ.
1 . ಅಧಿಕೃತ ವೆಬ್ಸೈಟ್ kea.kar.nic.inಗೆ ಭೇಟಿ ನೀಡಿ.
2. ಇಲ್ಲಿ ಪಿಜಿಸಿಇಟಿ 2021 ರಿಸಲ್ಟ್ ಲಿಂಕ್ ಮೇಲೆ ಒತ್ತಿರಿ.
3.ಪಿಜಿಸಿಇಟಿ ಸಂಖ್ಯೆ ಸೇರಿದಂತೆ ಕೇಳಲಾಗುವ ಮಾಹಿತಿಗಳನ್ನು ಒದಗಿಸಿ.
4. ಪಿಜಿಸಿಇಟಿ ರ್ಯಾಂಕ್ ಕಾರ್ಡ್ನ್ನು ಡೌನ್ಲೋಡ್ ಮಾಡಿ ಮುಂದಿನ ಬಳಕೆಗಾಗಿ ಇಟ್ಟುಕೊಳ್ಳಿ.
ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ M.E./M.Tech, M.Arch, MBA ಮತ್ತು MCA ಕೋರ್ಸ್ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲಿ ಈ ಪಿಜಿಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.