ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗದೆ ಓಡುತ್ತಿದೆ. ಇತ್ತ ರಾಜ್ಯದ ಮುಖ್ಯ ಮಂತ್ರಿಯು ವೈರಸ್ ಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಂತು ಪ್ರಕರಣಗಳು, ಪಾಸಿಟಿವಿಟಿ ರೇಟ್ ಎರಡೂ ಬೆಳೆಯುತ್ತಿದೆ. ಹೀಗಿರುವಾಗ ಸೇಫ್ ಝೋನ್ ಎಂದು ಕರೆಸಿಕೊಂಡಿದ್ದ, ರಾಮನಗರದಲ್ಲಿ ಪಾಸಿಟಿವಿಟಿ ದರ ಏಕಾ ಏಕಿ ಹೆಚ್ಚಳವಾಗಿದೆ.
ಹೌದು, RAT ಅಂದರೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಅಥವಾ ಕ್ಷಿಪ್ರ ಪರೀಕ್ಷೆಯಲ್ಲಿ ರಾಮನಗರದ ಪಾಸಿಟಿವಿಟಿ ರೇಟ್ ಬರೋಬ್ಬರಿ 30% ದಾಖಲಾಗಿದೆ. ಈ ಮೂಲಕ , RAT ಟೆಸ್ಟ್ ನ ಪಾಸಿಟಿವಿಟಿ ದರದಲ್ಲಿ ರಾಮನಗರ ಕರ್ನಾಟಕಕ್ಕೆ ನಂ 1 ಆಗಿದೆ ಎಂದು ಆರೋಗ್ಯ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಇನ್ನು ಎರಡನೇ ಸ್ಥಾನದಲ್ಲಿ ಬೆಂಗಳೂರು ಇರಬಹುದು ಅಂದುಕೊಂಡಿರ್ತಿರಾ ಆದ್ರೆ, ಆ ಸ್ಥಾನದಲ್ಲಿ 20.21% ಪಾಸಿಟಿವಿಟಿ ರೇಟ್ ಹೊಂದಿರೋ ದಾವಣಗೆರೆ ಇದೆ.
ಎಲ್ಲಾ ಜಿಲ್ಲೆಗಳಿಗಿಂತ ರಾಮನಗರದಲ್ಲಿ ಹೆಚ್ಚು ಪಾಸಿಟಿವಿಟಿ ರೇಟ್ ಬಂದಿರೋದು ಅಲ್ಲಿನ ನಿವಾಸಿಗಳು ಹಾಗೂ ಆರೋಗ್ಯ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ. ಆದರೆ, ಇದೇ ವೇಳೆ RTPCR ಟೆಸ್ಟ್ ನಲ್ಲಿ ಕಡಿಮೆ ಪಾಸಿಟಿವಿಟಿ ದರ ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 5.84% ಪಾಸಿಟಿವಿಟಿ ರೇಟ್ ಇದೆ.