ನೊಯ್ಡಾದಲ್ಲಿನ ಸೆಕ್ಟರ್ 78ರ ಹೈಡಿ ಪಾರ್ಕ್ ಸೊಸೈಟಿಯಲ್ಲಿ ಒಂದು ವರ್ಷದ ಬಾಲಕಿ ಮತ್ತು ಆಕೆಯ ಚಿಕ್ಕಮ್ಮ ಲಿಫ್ಟ್ ನಲ್ಲಿ ತೆರಳುತ್ತಿದ್ದರು. ಏಕಾಏಕಿ, ಕರೆಂಟ್ ಸಂಪರ್ಕ ಕಡಿತಗೊಂಡಿದೆ.
ಕೂಡಲೇ ಲಿಫ್ಟ್ ನಿಂತುಕೊಂಡಿದ್ದು, ಗಾಬರಿಯಿಂದ ಚಿಕ್ಕಮ್ಮ ಬಾಲಕಿಯನ್ನು ನೋಡುತ್ತಿರುವಂತೆಯೇ, ಗಾಳಿ ಸಾಕಾಗದೆಯೇ ಬಾಲಕಿಯು ಮೂರ್ಛೆ ಹೋಗಿದ್ದಾಳೆ. 15 ನಿಮಿಷಗಳಲ್ಲಿ ಲಿಫ್ಟ್ ಕಾರ್ಯಾಚರಣೆ ಆರಂಭಿಸಿ, ಬಾಲಕಿ-ಚಿಕ್ಕಮ್ಮ ಸುರಕ್ಷಿತವಾಗಿಯೇ ಮನೆ ಸೇರಿಕೊಂಡಿದ್ದಾರೆ.
BIG BREAKING: ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್, 24 ಗಂಟೆಯಲ್ಲಿ 19 ಸಾವಿರ ಜನರ ಸ್ಥಳಾಂತರ
ಆದರೆ ಈ ಘಟನೆಯಿಂದ ಮನನೊಂದ ಅವರ ಕುಟುಂಬಸ್ಥರು ಅಪಾರ್ಟ್‍ಮೆಂಟ್ ಮಾಲೀಕರ ಸಂಘದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ನಡುವೆ ಕುಟುಂಬಸ್ಥರು ಆಕ್ರೋಶಗೊಂಡು ಅಪಾರ್ಟ್‍ಮೆಂಟ್ ನಿರ್ವಹಣೆ ಸಿಬ್ಬಂದಿ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ಸೊಸೈಟಿ ಸಿಬ್ಬಂದಿ ಮೇಲೆ ಕಿರುಕುಳದ ಆರೋಪವನ್ನು ಕುಟುಂಬಸ್ಥರು ಹೊರಿಸಿದ್ದಾರೆ.