ಈಗ ಬಿರು ಬೇಸಿಗೆ ಜೊತೆಗೆ ವಿದ್ಯುತ್ ಕಡಿತದ ಸಮಸ್ಯೆಯೂ ಹೆಚ್ಚಾಗಿದೆ. ಫ್ಯಾನ್ ಮತ್ತು ಎಸಿ ಇಲ್ಲದೆ ಬದುಕುವುದೇ ಅಸಾಧ್ಯ ಎಂಬಂತಹ ಸ್ಥಿತಿಯಿದೆ. ಆಗಾಗ ವಿದ್ಯುತ್ ಕಡಿತ ಮಾಡಿಬಿಟ್ಟರೆ ಸೆಖೆಯಿಂದ ಕಂಗಾಲಾಗುತ್ತಾರೆ ಜನರು. ಪ್ರತಿ ಮನೆಯಲ್ಲೂ ಇನ್ವರ್ಟರ್ ಸೌಲಭ್ಯ. ಎಷ್ಟೋ ಜನ ಗಂಟೆಗಟ್ಟಲೆ ಕರೆಂಟ್ ಇಲ್ಲದೆ ಸೆಖೆಯಲ್ಲೇ ಕಾಲಕಳೆಯುತ್ತಾರೆ. ಈ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಫ್ಯಾನ್ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿದ್ಯುತ್ ಇಲ್ಲದೆ ಗಂಟೆಗಳ ಕಾಲ ಓಡುವ ಫ್ಯಾನ್‌ಗಳನ್ನು ಕೊಂಡುಕೊಳ್ಳಬೇಕು.
Fippy MR-2912
ಇದು ರೀಚಾರ್ಜೇಬಲ್ ಬ್ಯಾಟರಿ ಹೊಂದಿರುವ ಟೇಬಲ್ ಫ್ಯಾನ್. ಮೂರು ಬ್ಲೇಡ್‌ಗಳೊಂದಿಗೆ ಬರುತ್ತದೆ. ಬಿಳಿ ಬಣ್ಣದಲ್ಲಿ ಲಭ್ಯವಿದೆ. ಇದನ್ನು ಗೋಡೆ ಮೇಲೆ ಕೂಡ ಜೋಡಿಸಬಹುದು ಅಥವಾ ಮೇಜಿನ ಮೇಲೂ ಇಡಬಹುದು. ಅಡಿಗೆ ಕೋಣೆ, ಮಲಗುವ ಕೋಣೆ, ವಾಸದ ಕೋಣೆ ಹೀಗೆ ಎಲ್ಲಿ ಬೇಕೆಂದರಲ್ಲಿ ಕರೆಂಟ್ ಇಲ್ಲದೇ ಇದ್ದಾಗಲೂ ಈ ಫ್ಯಾನ್ ಅನ್ನು ಹಾಕಿಕೊಳ್ಳಬಹುದು. ಇದು USB ಮತ್ತು AC DC ವಿಧಾನಗಳಲ್ಲಿ ಸಂಪರ್ಕವನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದ್ರೆ ಫುಲ್ ಸ್ಪೀಡ್‌ನಲ್ಲಿ 3.5 ಗಂಟೆ ಓಡುತ್ತದೆ. ಸ್ಪೀಡ್ ಮಧ್ಯಮಕ್ಕಿಟ್ಟರೆ 5.5 ಗಂಟೆಗಳವರೆಗೆ ಮತ್ತು ಇನ್ನೂ ಕಡಿಮೆ ಸ್ಪೀಡ್‌ನಲ್ಲಿ ಸುಮಾರು 9 ಗಂಟೆಗಳವರೆಗೆ ಈ ಫ್ಯಾನ್ ಓಡಬಲ್ಲದು. Amazon ನಲ್ಲಿ ಇದರ ಬೆಲೆ 3,299 ರೂಪಾಯಿ ಇದೆ.
Bajaj PYGMY Mini 110 MM 10 W Fan
ಇದು ಬಜೆಟ್ ಸ್ನೇಹಿ ಫ್ಯಾನ್. ಈ ಫ್ಯಾನ್ ಅದ್ಭುತ ವಿನ್ಯಾಸ ಹೊಂದಿದೆ. USB ಚಾರ್ಜಿಂಗ್‌ನೊಂದಿಗೆ ಲಭ್ಯವಿದೆ. ಇದು Li-Ion ಬ್ಯಾಟರಿಯಿಂದ ಚಾಲಿತವಾಗಿದೆ. ಸಂಪೂರ್ಣ ಚಾರ್ಜ್ ಮಾಡಿದ ನಂತರ 4 ಗಂಟೆಗಳವರೆಗೆ ಓಡುತ್ತದೆ. ಫ್ಯಾನ್ ಕ್ಲಿಪ್ ಇರುವುದರಿಂದ ಅದನ್ನು ಟೇಬಲ್ ಅಥವಾ ಯಾವುದೇ ಗಟ್ಟಿಮುಟ್ಟಾದ ಮೇಲ್ಮೈಯಲ್ಲಿ ಹೊಂದಿಸಬಹುದು. ಇದು ಕಾಂಪ್ಯಾಕ್ಟ್ ಗಾತ್ರದಲ್ಲಿದೆ ಮತ್ತು ಎಲ್ಲಿ ಬೇಕಾದರೂ ಸುಲಭವಾಗಿ ಅಳವಡಿಸಬಹುದಾಗಿದೆ. ಅಮೇಜಾನ್‌ನಲ್ಲಿ ಇದರ ಬೆಲೆ 1,170 ರೂಪಾಯಿ ಇದೆ.