ಲಾಕ್ ಡೌನ್ ಸಮಯದಲ್ಲಿ ನೀವು ಹಲವು ರೀತಿಯ ಕಷಾಯಗಳನ್ನು ಮಾಡಿ ಕುಡಿಯಲು ಕಲಿತಿರಬಹುದು. ಅದರಲ್ಲಿ ಅತ್ಯುತ್ತಮ ಎಂದರೆ ಈ ಕಷಾಯ.
ನೀರು ಕುದಿಸಿ, ಒಂದು ಚಮಚ ಕಾಳು ಮೆಣಸಿನ ಪುಡಿ ಹಾಕಿ. ಚಿಟಿಕೆ ಅರಿಶಿನ, ಜಜ್ಜಿದ ಒಣಶುಂಠಿ ಸೇರಿಸಿ. ನಾಲ್ಕು ಎಲೆ ತುಳಸಿ, ಸಾಮ್ರಾಣಿ ಸೊಪ್ಪು ಹಾಕಿ. ಐದು ನಿಮಿಷ ಮುಚ್ಚಿಟ್ಟು ಕುದಿಸಿ. ಬಳಿಕ ಸೋಸಿ ಬಿಸಿ ಇರುವಂತೆ ಕುಡಿಯಿರಿ.
ಈ ಕಷಾಯ ಸೇವನೆಯಿಂದ ಮೂಗಿನಿಂದ ನೀರಿಳಿಯುವುದು, ಕಟ್ಟಿದ ಮೂಗಿನ ಸಮಸ್ಯೆ, ಸುಸ್ತು, ಜ್ವರದ ಲಕ್ಷಣಗಳು ದೂರವಾಗುತ್ತವೆ.
ಕೆಲವರಿಗೆ ಶೀತವಾಗುವ ಲಕ್ಷಣವಾಗಿ ವಿಪರೀತ ಸೀನು ಬರುತ್ತಿರುತ್ತದೆ. ನಿಮ್ಮ ಈ ಕಷಾಯ ಸೀನುವಿಕೆಯ ಸಮಸ್ಯೆಯನ್ನೂ ದೂರ ಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕಫ, ಸೈನಸ್ ಸಮಸ್ಯೆ ಬರದಂತೆ ತಡೆಯುತ್ತದೆ.