alex Certify ಕರಿದ ತಿನಿಸು ತಿಂದಾಗ ಕಾಡುವ ಅಸಿಡಿಟಿ ಸಮಸ್ಯೆಗೆ ಇಲ್ಲಿದೆ ಸುಲಭ ಮನೆಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರಿದ ತಿನಿಸು ತಿಂದಾಗ ಕಾಡುವ ಅಸಿಡಿಟಿ ಸಮಸ್ಯೆಗೆ ಇಲ್ಲಿದೆ ಸುಲಭ ಮನೆಮದ್ದು

ಕರಿದ ತಿನಿಸುಗಳನ್ನು ಬಹುತೇಕ ಎಲ್ಲರೂ ಇಷ್ಟಪಡ್ತಾರೆ. ಬೋಂಡಾ, ಬಜ್ಜಿ, ಪಾನಿಪುರಿ, ಬರ್ಗರ್‌ ಹೀಗೆ ಬಗೆಬಗೆಯ ಜಂಕ್‌ ಫುಡ್‌ಗಳೇ ನಮ್ಮೆಲ್ಲರ ಫೇವರಿಟ್.‌ ಈ ತಿನಿಸುಗಳು ಬಹಳ ರುಚಿಕರವಾಗಿರುತ್ತವೆ, ಆದ್ರೆ ಕರಿದ ತಿಂಡಿಗಳನ್ನು ತಿಂದ ಮೇಲೆ ಅನೇಕ ಸಮಸ್ಯೆಗಳು ಶುರುವಾಗುತ್ತವೆ.

ಕೊಲೆಸ್ಟ್ರಾಲ್, ಬಿಪಿ, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಈ ತಿನಿಸುಗಳು ಹೆಚ್ಚಿಸುತ್ತದೆ. ಇವಿಷ್ಟೇ ಅಲ್ಲ ಕರಿದ ತಿನಿಸುಗಳ ಸೇವನೆ ಬಳಿಕ ಆಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಒಮ್ಮೆ ಕರಿದ ಎಣ್ಣೆಯಲ್ಲೇ ಮತ್ತೆ ತಿನಿಸುಗಳನ್ನು ಕರಿದು ತಿಂದಾಗಲಂತೂ ಆಸಿಡಿಟಿ ಕಾಮನ್‌. ಆ ತಿನಿಸುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದರಿಂದ ಆಸಿಡಿಟಿ ಉಂಟಾಗುತ್ತದೆ.

ಈ ಆಸಿಡಿಟಿಗೆ ಕೆಲವೊಂದು ಮನೆಮದ್ದುಗಳ ಮೂಲಕ ಸುಲಭ ಪರಿಹಾರ ಕಂಡುಕೊಳ್ಳಬಹುದು.  ಮಲಬದ್ಧತೆ, ಅಸಿಡಿಟಿ, ಅಜೀರ್ಣ, ಗ್ಯಾಸ್‌ನಂತಹ ಸಮಸ್ಯೆಗಳು ಸಹ ಇದ್ದಾಗ ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಕಷ್ಟವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಔಷಧಗಳನ್ನು ಸೇವಿಸುವ ಬದಲು ಕೆಲವು ಮನೆಮದ್ದುಗಳನ್ನು ಮಾಡಬಹುದು.

ಓಮ: ಅನಾರೋಗ್ಯಕರ ಆಹಾರ ಸೇವನೆಯಿಂದ ಉಂಟಾಗುವ ಆಸಿಡಿಟಿಗೆ ಓಮ ಅಥವಾ ಅಜ್ವೈನ್‌ ಪರಿಹಾರ ನೀಡುತ್ತದೆ. ಸ್ವಲ್ಪ ಓಮವನ್ನು ನೀರಿನಲ್ಲಿ ಕುದಿಸಿ ಅದನ್ನು ಕುಡಿಯಿರಿ.

ಸೋಂಪು: ಸೋಂಪು ಮೌತ್‌ ಫ್ರೆಶ್ನರ್‌ನಂತೆ ಕೆಲಸ ಮಾಡುತ್ತದೆ. ಇದರ ಜೊತೆಜೊತೆಗೆ ಆಸಿಡಿಟಿಯಿಂದಲೂ ಮುಕ್ತಿ ನೀಡುತ್ತದೆ. ಒಂದು ಚಮಚ ಸೋಂಪಿನ ಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಆ ನೀರನ್ನು ಕುಡಿಯಿರಿ.

ಇಂಗು: ಆಹಾರದ ರುಚಿಯನ್ನು ಹೆಚ್ಚಿಸಲು ಇಂಗು ಬಳಸುತ್ತೇವೆ. ಇದು ಅಜೀರ್ಣ ಮತ್ತು ಅಸಿಡಿಟಿಗೂ ಪರಿಣಾಮಕಾರಿ ಮದ್ದು. ಇಂಗನ್ನು ಬಿಸಿ ನೀರಿಗೆ ಬೆರೆಸಿ ಸೇವನೆ ಮಾಡಿ. ಈ ರೀತಿ ಮಾಡುವುದರಿಂದ ಆಸಿಡಿಟಿ ಬಹುಬೇಗ ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...