ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿಥ್ ಕರಣ್ ಶೋ ಸದ್ಯ ಚೆನ್ನಾಗಿ ನಡೆಯುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ನಟರು, ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾನೆ ಇರ್ತಾರೆ. ಈ ಶೋ ಕುರಿತಂತೆ ಇದೀಗ ಕಾಶ್ಮೀರಿ ಫೈಲ್ ಸಿನಿಮಾ ನಿರ್ದೇಶಕ ಕೆಂಡ ಕಾರಿದ್ದಾರೆ. ನಾನು ಆ ಕಾರ್ಯಕ್ರಮಕ್ಕೆ ಹೋಗೋದು ಇಲ್ಲ ಅವರು ಕರೆಯುವುದೂ ಇಲ್ಲ ಎಂದಿದ್ದಾರೆ.
ಹೌದು, ಅದೊಂದು ಸೆಕ್ಸ್ ಆಧಾರಿತ ಕಾರ್ಯಕ್ರಮದ ರೀತಿ ಬಿಂಬಿತವಾಗುತ್ತಿದೆ. ಲವ್, ಬ್ರೇಕ್ ಅಪ್, ಸೆಕ್ಸ್ ಇಷ್ಟು ವಿಚಾರ ಇಟ್ಟುಕೊಂಡೇ ಮಾತುಕತೆ ಮಾಡಲಾಗುತ್ತದೆ. ಇಂಥಹ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ. ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋಕೆ ಅಲ್ಲಿಗೆ ಯಾಕೆ ಹೋಗಬೇಕು ಎಂದು ಕಿಡಿ ಕಾರಿದ್ದಾರೆ. ಕರಣ್ ಜೋಹರ್ ಕೇಳುವ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅಗ್ನಿಹೋತ್ರಿ ಅಲ್ಲಿಗೆ ಹೋಗುವವರ ಮೇಲೂ ಅನುಮಾನ ಇದೆ ಎಂದಿದ್ದಾರೆ.
ಅಲ್ಲಿಗೆ ಹೋದರೆ ನಮ್ಮ ಮರ್ಯಾದೆ ನಾವೇ ತೆಗೆದುಕೊಂಡಂತೆ ಎಂದಿರುವ ಅವರು, ನಾನು ಸೆಕ್ಸ್ ಅನ್ನು ನನ್ನ ಹೆಂಡತಿ ಜೊತೆ ಎಂಜಾಯ್ ಮಾಡ್ತೀನಿ. ಕರಣ್ ಜೋಹರ್ ತರಹ ಅಲ್ಲ ಎಂದಿದ್ದಾರೆ. ನನಗೆ ಮಾಡಲು ತುಂಬಾ ಕೆಲಸ ಇದೆ. ಅದನ್ನು ಮಾಡ್ತೀನಿ ಎಂದು ಕರಣ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.