ಅಡುಗೆ ಮನೆ ಹಾಗೂ ಅಡುಗೆ ಮನೆಯಲ್ಲಿರುವ ಪಾತ್ರೆಗಳು ಸದಾ ಹೊಳೆಯುತ್ತಿರಲಿ ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಅಡುಗೆ ಮಾಡುವ ವೇಳೆ ಪಾತ್ರೆಯ ತಳ ಹಿಡಿಯುತ್ತದೆ. ಪಾತ್ರೆ ಕರಕಲಾಗುತ್ತದೆ. ಅದನ್ನು ಉಜ್ಜಿ ತೆಗೆಯೋದು ಸುಲಭವಲ್ಲ.
ಆದ್ರೆ ಕೆಲ ಟಿಪ್ಸ್ ಮೂಲಕ ಸುಲಭವಾಗಿ ಕರಕಲಾದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.
ಅಡುಗೆ ಸೋಡ ಬೆಸ್ಟ್. ಅಡುಗೆ ಸೋಡಾ, ಎರಡು ಚಮಚ ನಿಂಬೆ ರಸ ಹಾಗೂ 2 ಕಪ್ ಬಿಸಿ ನೀರನ್ನು ಪಾತ್ರೆಗೆ ಹಾಕಿ, ಉಕ್ಕಿನ ಸ್ಕ್ರಬ್ಬರ್ ನಲ್ಲಿ ಚೆನ್ನಾಗಿ ತಿಕ್ಕಿದರೆ ಪಾತ್ರೆ ಕರಕಲು ಮಾಯವಾಗುತ್ತದೆ.
ಸುಟ್ಟ ಪಾತ್ರೆಗೆ ಉಪ್ಪು ಮತ್ತು ನೀರನ್ನು ಹಾಕಿ ಸುಮಾರು 4 ನಿಮಿಷ ಕುದಿಸಿ. ಇದರ ನಂತರ, ಸ್ಕ್ರಬ್ ಬ್ರಷ್ ಅಥವಾ ಬ್ರಷ್‌ನಿಂದ ಸ್ವಚ್ಛಗೊಳಿಸಿ.
ಸುಟ್ಟ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಟೊಮೆಟೊ ಜ್ಯೂಸ್ ತುಂಬಾ ಸಹಾಯಕ. ಬಿಸಿ ಪಾತ್ರೆಯಲ್ಲಿ ಟೊಮೆಟೊ ಜ್ಯೂಸ್ ಮತ್ತು ನೀರನ್ನು ಸೇರಿಸಿ ಬಿಸಿ ಮಾಡಿ. ನಂತ್ರ ಸ್ಕ್ರಬ್ಬರ್‌ನಿಂದ ಸ್ವಚ್ಛಗೊಳಿಸಿ.
ನಿಂಬೆಯನ್ನು ಪಾತ್ರೆಯ ಕರಕಲು ಭಾಗಕ್ಕೆ ಹಾಕಿ ಉಜ್ಜಿ. ನಂತ್ರ ಪಾತ್ರೆಗೆ ಮೂರು ಕಪ್ ನೀರನ್ನು ಹಾಕಿ ಬಿಸಿ ಮಾಡಿ. ನಂತ್ರ ಬ್ರಷ್ ನಿಂದ ಸ್ವಚ್ಛಗೊಳಿಸಿ.