alex Certify ಕಬ್ಬಿನ ಬೆಲ್ಲದ ಬದಲು ಈ ಸಿಹಿ ಪದಾರ್ಥದಿಂದ ತಯಾರಿಸಿದ ಬೆಲ್ಲವನ್ನು ಸೇವಿಸಿ; ಇದರಲ್ಲಿದೆ ಅದ್ಭುತ ಪ್ರಯೋಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಬ್ಬಿನ ಬೆಲ್ಲದ ಬದಲು ಈ ಸಿಹಿ ಪದಾರ್ಥದಿಂದ ತಯಾರಿಸಿದ ಬೆಲ್ಲವನ್ನು ಸೇವಿಸಿ; ಇದರಲ್ಲಿದೆ ಅದ್ಭುತ ಪ್ರಯೋಜನ…!

ಕಬ್ಬಿನಿಂದ ತಯಾರಿಸಿದ ಬೆಲ್ಲ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ರಾಸಾಯನಿಕ ಪ್ರಕ್ರಿಯೆಯ ಮೂಲಕ ಸಂಸ್ಕರಿಸುವ ಬಿಳಿ ಸಕ್ಕರೆಗಿಂತ ಬೆಲ್ಲ ಆರೋಗ್ಯಕರ.

ಸಕ್ಕರೆಯನ್ನು ಸಂಸ್ಕರಿಸಲು ಸಲ್ಫರ್ ಡೈಆಕ್ಸೈಡ್, ಫಾಸ್ಪರಿಕ್ ಆಮ್ಲ ಇತ್ಯಾದಿಗಳನ್ನು ಬಳಸಲಾಗುತ್ತದೆ. ಕೇವಲ ಕಬ್ಬಿನ ಬೆಲ್ಲ ಮಾತ್ರವಲ್ಲ, ಖರ್ಜೂರದಿಂದಲೂ ಬೆಲ್ಲವನ್ನು ತಯಾರಿಸಬಹುದು. ಖರ್ಜೂರವು ತುಂಬಾ ರುಚಿಕರವಾದ ಹಣ್ಣಾಗಿದ್ದು, ಇದರಲ್ಲಿ ಆಹಾರದ ಫೈಬರ್, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಬಿ 1 ನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಖರ್ಜೂರದ ಬೆಲ್ಲವನ್ನು ತಿನ್ನುವುದರಿಂದ ಅನೇಕ ಲಾಭಗಳಿವೆ.

ಶೀತದಿಂದ ರಕ್ಷಣೆ

ಬದಲಾದ ಋತುಮಾನದಲ್ಲಿ ಸೋಂಕು ಹೆಚ್ಚುತ್ತದೆ. ಇದರಿಂದ ಶೀತ, ಕೆಮ್ಮು ಮತ್ತು ನೆಗಡಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಖರ್ಜೂರದಿಂದ ಮಾಡಿದ ಬೆಲ್ಲದ ಕಷಾಯವನ್ನು ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಖರ್ಜೂರದ ಪರಿಣಾಮ ಉಷ್ಣವಾಗಿರುವುದಿರಿಂದ ನೆಗಡಿಯನ್ನು ಇದು ನಿವಾರಿಸುತ್ತದೆ.

ಜೀರ್ಣಕ್ರಿಯೆ ಸರಿಯಾಗಿರುತ್ತದೆ

ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿದ್ದರೆ, ಈ ಸಮಸ್ಯೆಯನ್ನು ಹೋಗಲಾಡಿಸಲು ನಿಯಮಿತವಾಗಿ ಖರ್ಜೂರದ ಬೆಲ್ಲವನ್ನು ಸೇವಿಸಬೇಕು. ಇದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಮಲಬದ್ಧತೆ, ಹೊಟ್ಟೆಯಲ್ಲಿನ ಗ್ಯಾಸ್‌ನಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

ತ್ವರಿತ ಶಕ್ತಿ ಸಿಗುತ್ತದೆ

ದಿನವಿಡೀ ಕೆಲಸ ಮಾಡುವಾಗ ಆಗಾಗ ಆಯಾಸವನ್ನು ಅನುಭವಿಸುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ ನೀವು ಖರ್ಜೂರದಿಂದ ಮಾಡಿದ ಬೆಲ್ಲವನ್ನು ಸೇವಿಸಬಹುದು. ಹೀಗೆ ಮಾಡುವುದರಿಂದ ದೇಹವು ತ್ವರಿತ ಶಕ್ತಿಯನ್ನು ಪಡೆಯುತ್ತದೆ ಮತ್ತು ನೀವು ಉಲ್ಲಾಸವನ್ನು ಅನುಭವಿಸುತ್ತೀರಿ.

ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿ

ಮಧುಮೇಹ ರೋಗಿಗಳಿಗೆ ಸಿಹಿ ಪದಾರ್ಥಗಳು ವಿಷಕ್ಕಿಂತ ಕಡಿಮೆಯಿಲ್ಲ. ಆದರೂ ಅವರು ಖರ್ಜೂರದಿಂದ ಮಾಡಿದ ಬೆಲ್ಲವನ್ನು ಖಂಡಿತವಾಗಿ ಸೇವಿಸಬಹುದು. ಮಿತವಾದ ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡಬೇಕು. ಖರ್ಜೂರದಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...