ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕಪ್ಪೆಗಳು, ಕೀಟಗಳ ಹಾವಳಿ ಹೆಚ್ಚಾಗುತ್ತದೆ. ಎಲ್ಲವೂ ಮನೆಯ ಬಳಿ ಬಂದು ಕಿರಿಕಿರಿ ಉಂಟುಮಾಡುತ್ತವೆ. ಕೆಲವರು ಕಪ್ಪೆಗಳನ್ನು ಕಂಡು ಭಯಭೀತರಾಗುತ್ತಾರೆ. ಅದನ್ನು ಓಡಿಸಲು ತುಂಬಾ ಕಷ್ಟಪಡುತ್ತಾರೆ. ಹಾಗಾಗಿ ಈ ಕಪ್ಪೆಗಳು ಮನೆಯ ಬಳಿ ಬರದಂತೆ ತಡೆಯಲು ಮತ್ತು ಅವುಗಳನ್ನು ಓಡಿಸಲು ಈ ಸರಳ ಮಾರ್ಗಗಳನ್ನು ಬಳಸಿ.
- ಕಪ್ಪೆಗಳು ಮನೆಯ ಬಳಿ ಬರದಂತೆ ತಡೆಯಲು ಉಪ್ಪನ್ನು ಬಳಸಬಹುದು. ಆದರೆ ಕಪ್ಪೆಗಳ ಮೇಲೆ ಉಪ್ಪನ್ನು ಸಿಂಪಡಿಸದಂತೆ ನೋಡಿಕೊಳ್ಳಿ. ಯಾಕೆಂದರೆ ಇದರಿಂದ ಅವುಗಳಿಗೆ ತೊಂದರೆಯಾಗಬಹುದು. ಹಾಗಾಗಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಿಂಪಡಿಸಿ.
- ಕಪ್ಪೆಗಳನ್ನು ದೂರ ಓಡಿಸಲು ಕಾಫಿ ಕೂಡ ಸಹಕಾರಿಯಾಗಿದೆ. ಹಾಗಾಗಿ ಕಾಫಿ ಪುಡಿಯನ್ನು ಬಿಸಿ ನೀರಿನಲ್ಲಿ ಮಿಕ್ಸ್ ಮಾಡಿ ಮನೆಯ ಸುತ್ತಲೂ ಸಿಂಪಡಿಸಿ.
-4 ಗ್ಲಾಸ್ ನೀರಿಗೆ ನಿಂಬೆ 3 ಚಮಚ, ವಿನೆಗರ್ 2 ಕಪ್ ಬೆರೆಸಿ ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಕಪ್ಪೆ ಬರುವಂತಹ ಸ್ಥಳಗಳಲ್ಲಿ ಸಿಂಪಡಿಸಿ. ಇದರಿಂದ ಕಪ್ಪೆ ತಕ್ಷಣ ಓಡಿಹೋಗುತ್ತದೆ.
ಕಪ್ಪೆಗಳು ಕೀಟಗಳನ್ನು ತಿನ್ನಲು ಹುಲ್ಲುಗಳಿರುವ ಪ್ರದೇಶಕ್ಕೆ ಬರುತ್ತದೆ. ಹಾಗಾಗಿ ನಿಮ್ಮ ಮನೆಯ ಬಳಿ ಹುಲ್ಲು ಬೆಳೆದ ಪ್ರದೇಶದಲ್ಲಿ ಬ್ಲೀಚಿಂಗ್ ಪೌಡರ್ ಅನ್ನು ಸಿಂಪಡಿಸಿ.