ಶನಿ ದೇವರನ್ನು ನ್ಯಾಯದ ದೇವರೆಂದು ಪರಿಗಣಿಸಲಾಗಿದೆ.
ಶನಿ ದೃಷ್ಟಿ ಬಿದ್ದವರ ಜೀವನದಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ. ಶನಿ ದೇವನನ್ನು ಮೆಚ್ಚಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ಕುದುರೆ ಲಾಳ ಶನಿ ಕೋಪಕ್ಕೆ ಮದ್ದು. ಕಪ್ಪು ಕುದುರೆ ಲಾಳದಿಂದ ಮಾಡಿದ ಉಂಗುರವನ್ನು ಧರಿಸುವುದ್ರಿಂದ ಶನಿ ಹಾವಳಿಯನ್ನು ತಪ್ಪಿಸಬಹುದು. ಸಾಡೆ ಸಾಥ್ ಶನಿ ದೋಷವಿರುವವರಿಗೆ ಕಪ್ಪು ಕುದುರೆ ಲಾಳದ ಉಂಗುರ ಧರಿಸುವಂತೆ ಹೇಳಲಾಗುತ್ತದೆ.
ಶನಿವಾರ ಕಪ್ಪು ಕುದುರೆ ಲಾಳದ ಉಂಗುರವನ್ನು ಬಲಗೈ ಮಧ್ಯದ ಬೆರಳಿಗೆ ಧರಿಸುವುದ್ರಿಂದ ನಿಂತ ಕೆಲಸ ಮತ್ತೆ ಶುರುವಾಗುತ್ತದೆ. ಇದು ಶನಿದೇವನ ಸಂತೋಷಕ್ಕೆ ಕಾರಣವಾಗುತ್ತದೆ.
ಕಬ್ಬಿಣ ಶನಿಯ ಪ್ರೀತಿಯ ಲೋಹವೆಂದು ಪರಿಗಣಿಸಲಾಗಿದೆ. ಮನೆಯ ಮುಂದೆ ಕಪ್ಪು ಕುದುರೆ ಲಾಳವನ್ನು ಹಾಕಬಹುದು. ಇದು ಮನೆಯ ಸಮೃದ್ಧಿಗೆ ಕಾರಣವಾಗುತ್ತದೆ.
ಓಡುವಾಗ ಕುದುರೆ ಲಾಳ ಬೇರೆಯಾಗುತ್ತದೆ. ಇದನ್ನು ಶುಭವೆನ್ನಲಾಗುತ್ತದೆ. ಅದು ಮನೆಯಲ್ಲಿದ್ದರೆ ಅದೃಷ್ಟ ಒಲಿಯುತ್ತದೆ. ಕಪ್ಪು ಕುದುರೆ ಗೊಂಬೆಯನ್ನು ಅಂಗಡಿ, ಕಚೇರಿ ಮುಂದೆ ನೇತು ಹಾಕಿದ್ರೆ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ.