alex Certify ಕಪ್ಪು ʼಬೆಳ್ಳುಳ್ಳಿʼ ನೋಡಿದ್ದೀರಾ……? ಅಚ್ಚರಿ ಮೂಡಿಸುತ್ತೆ ಇದರಲ್ಲಿರುವ ಆರೋಗ್ಯಕಾರಿ ಅಂಶಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ಪು ʼಬೆಳ್ಳುಳ್ಳಿʼ ನೋಡಿದ್ದೀರಾ……? ಅಚ್ಚರಿ ಮೂಡಿಸುತ್ತೆ ಇದರಲ್ಲಿರುವ ಆರೋಗ್ಯಕಾರಿ ಅಂಶಗಳು

ನಮಗೆಲ್ಲ ಗೊತ್ತಿರೋದು ಬಿಳಿ ಬಣ್ಣದಲ್ಲಿರುವ ಬೆಳ್ಳುಳ್ಳಿ. ಆದ್ರೆ ಬಹು ಉಪಯೋಗಿ ಕಪ್ಪು ಬೆಳ್ಳುಳ್ಳಿ ಕೂಡ ಬಳಕೆಯಲ್ಲಿದೆ. ಈ ಕಪ್ಪು ಬೆಳ್ಳುಳ್ಳಿ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಅದರ ಸಿಪ್ಪೆ ಬೆಳ್ಳಗಿರುತ್ತದೆ, ಆದ್ರೆಒಳಗೆ ಸಂಪೂರ್ಣ ಕಪ್ಪು ಬಣ್ಣ ಹೊಂದಿರುತ್ತದೆ.

ಈ ಕಪ್ಪು ಬೆಳ್ಳುಳ್ಳಿ ಇಂದಿನದಲ್ಲ, ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ಇದೆ. ಇದು ಆಯುರ್ವೇದದಲ್ಲಿ ಹೆಚ್ಚು ಔಷಧವಾಗಿ ಬಳಸಲ್ಪಡುತ್ತದೆ. ಈ ಕಪ್ಪು ಬೆಳ್ಳುಳ್ಳಿಯನ್ನು ಪ್ರತ್ಯೇಕವಾಗಿ ಬೆಳೆಯುವುದಿಲ್ಲ. ಇದು ಬಿಳಿ ಬೆಳ್ಳುಳ್ಳಿಯ ಹುದುಗುವಿಕೆಯ ರೂಪವಾಗಿದೆ.

ಇದು ರುಚಿಯಲ್ಲಿ ಬಿಳಿ ಬೆಳ್ಳುಳ್ಳಿಯಷ್ಟು ಕಠುವಾಗಿರುವುದಿಲ್ಲ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ನೀವು ಈ ಬೆಳ್ಳುಳ್ಳಿಯನ್ನು ನಿರಂತರವಾಗಿ ಸೇವಿಸಿದರೆ, ಅದು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಸಕ್ಕರೆ ಕಾಯಿಲೆ ನಿಯಂತ್ರಣ : ಕಪ್ಪು ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಎಂಟಿವೈರಲ್ ಗುಣಲಕ್ಷಣಗಳು ಕಂಡುಬರುತ್ತವೆ. ಈ ಕಾರಣದಿಂದಾಗಿ ಕಪ್ಪು ಬೆಳ್ಳುಳ್ಳಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ : ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಕಪ್ಪು ಬೆಳ್ಳುಳ್ಳಿ ಸೇವನೆ ಮಾಡುವುದು ಉತ್ತಮ. ಕಪ್ಪು ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಅಂಶ ರಕ್ತವನ್ನು ತೆಳುಗೊಳಿಸಲು ಸಹಕಾರಿಯಾಗಿದೆ. ಹೃದಯಕ್ಕೆ ಯಾವುದೇ ಅಡಚಣೆಯಾಗದಂತೆ ಇದು ಕಾಪಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ : ಕಪ್ಪು ಬೆಳ್ಳುಳ್ಳಿ ಸೇವನೆಯಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಕಪ್ಪು ಬೆಳ್ಳುಳ್ಳಿಯಲ್ಲಿರೋ ಅಂಶಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ .

ರೋಗನಿರೋಧಕ ಶಕ್ತಿ ಹೆಚ್ಚಳ : ಕಪ್ಪು ಬೆಳ್ಳುಳ್ಳಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವಾಸ್ತವವಾಗಿ, ಇದರಲ್ಲಿ ಕಂಡುಬರುವ ಎಂಟಿ ಬ್ಯಾಕ್ಟೀರಿಯಲ್ ಮತ್ತು ಎಂಟಿ ವೈರಲ್ ಗುಣಲಕ್ಷಣಗಳು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...