ನಮ್ಮಲ್ಲಿ ಬಹುತೇಕರು ಕಪ್ಪಾದ ಕುತ್ತಿಗೆಯನ್ನು ಬಿಳಿ ಮಾಡಲು ತಿಕ್ಕಿ ತಿಕ್ಕಿ ಸೋತಿರುತ್ತೇವೆ. ನಿಮಗಾಗಿ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.
ಆ್ಯಪಲ್ ಸೈಡರ್ ವಿನೆಗರ್ ಬಳಸುವುದರಿಂದ ನಿಮ್ಮ ಕುತ್ತಿಗೆಗೆ ಸಹಜ ಬಣ್ಣ ನೀಡಬಹುದು. ಇದರಲ್ಲಿರುವ ನೈಸರ್ಗಿಕ ಗುಣಗಳಿಂದ ನಿಮ್ಮ ಕುತ್ತಿಗೆ ಹೊಳಪು ಪಡೆಯಬಹುದು. ಇದು ತ್ವಚೆಯ ಮೇಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ.
ಎರಡು ಚಮಚ ಆ್ಯಪಲ್ ಸೈಡರ್ ವಿನೆಗರ್ ಗೆ 4 ಚಮಚ ನೀರು ಬೆರೆಸಿ. ಹತ್ತಿಯ ಉಂಡೆಯನ್ನು ಅದಕ್ಕೆ ಅದ್ದಿ ಕಪ್ಪಾಗಿರುವ ತ್ವಚೆಯ ಭಾಗಕ್ಕೆ ಹಚ್ಚಿ. ಹತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದು ಮಾಯಿಸ್ಚರೈಸರ್ ಹಚ್ಚಿ. ಇದನ್ನು ನಿತ್ಯ ಪ್ರಯೋಗಿಸುವುದು ಬೇಡ.
ಬೇಕಿಂಗ್ ಸೋಡಾವನ್ನೂ ಇದೇ ರೀತಿ ಪ್ರಯತ್ನಿಸಬಹುದು. ಇದರ ಪೇಸ್ಟ್ ಅನ್ನು ತಯಾರಿಸಿ ಕುತ್ತಿಗೆಗೆ ಹಚ್ಚಿಕೊಂಡರೆ ಸಾಕು, ಇಪ್ಪತ್ತು ನಿಮಿಷದ ಬಳಿಕ ತೊಳೆದು ಮಾಯಿಶ್ಚರೈಸ್ ಮಾಡಿಕೊಳ್ಳಿ.
ಆಲೂಗಡ್ಡೆಯ ಸಿಪ್ಪೆ ತೆಗೆದು ತುರಿದು ರಸ ಹಿಂಡಿ. ಇದನ್ನು ಕುತ್ತಿಗೆಯ ಭಾಗಕ್ಕೆ ಮತ್ತು ತ್ವಚೆಯ ಮೇಲೆ ಕಪ್ಪು ಕಲೆ ಇರುವಲ್ಲಿಗೆ ಹಚ್ಚಿ. ತುಸು ಸಮಯದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ದಿನಕ್ಕೆರಡು ಬಾರಿ ಇದನ್ನು ಪುನರಾವರ್ತಿಸಿ.
ಕಡಲೆ ಹಿಟ್ಟಿಗೆ ಅರಶಿನ ಮತ್ತು ನಿಂಬೆರಸ ಸೇರಿಸಿ ಹಚ್ಚಿಕೊಂಡರೂ ಇದೇ ಪರಿಣಾಮವನ್ನು ಕಾಣಬಹುದು.