ಪಂಡೋರಾ ಆಭರಣಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇರುತ್ತದೆ. ನಿತ್ಯ ಧರಿಸುವುದರಿಂದ ಇವು ಕ್ರಮೇಣ ಬಣ್ಣ ಕಳೆದುಕೊಂಡು ಕಪ್ಪಗಾಗಿ ಆಕರ್ಷಣೆ ಕಳೆದುಕೊಳ್ಳುತ್ತವೆ. ಹೀಗಾಗದಂತೆ ತಡೆಯುವುದು ಹೇಗೆ?
ಪಂಡೋರಾದ ಆಭರಣಗಳ ಮೇಲೆ ನೇರವಾಗಿ ಬಾಡಿ ಲೋಷನ್, ಕ್ರೀಮ್ ಗಳು, ಪರ್ಫ್ಯೂಮ್, ಉಪ್ಪು ನೀರು ಬೀಳುವುದನ್ನು ತಪ್ಪಿಸಿ, ಇದರಿಂದ ಬಹುಬೇಗ ನಿಮ್ಮ ಆಭರಣಗಳು ಬಣ್ಣ ಕಳೆದುಕೊಳ್ಳಬಹುದು.
BIG NEWS: ಇಂಥಾ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ ? ಗರಂ ಆದ HDK
ಟೂತ್ ಪೇಸ್ಟ್ ಗೆ ತುಸು ನೀರು ಬೆರೆಸಿ ಅದರಲ್ಲಿ ಈ ಆಭರಣಗಳನ್ನು ನೆನೆಹಾಕಿ. ಬಳಿಕ ಬ್ರಶ್ ನಿಂದ ಚೆನ್ನಾಗಿ ತಿಕ್ಕಿ. ಇದರಿಂದ ಕಪ್ಪಾದ ಆಭರಣಗಳು ಬೆಳ್ಳಗಾಗುತ್ತವೆ. ಇದೇ ವಿಧಾನದಲ್ಲಿ ಬೇಕಿಂಗ್ ಸೋಡಾ ಹಾಗೂ ನಿಂಬೆರಸದಿಂದಲೂ ಇದೇ ಪ್ರಯೋಜನವನ್ನು ಪಡೆಯಬಹುದು.
ಇನ್ನು ಮಲಗುವ ವೇಳೆ ಈ ಆಭರಣಗಳನ್ನು ಧರಿಸುವುದನ್ನು ತಪ್ಪಿಸಿ. ಆಟವಾಡುವ ವೇಳೆ ಧರಿಸದಿರಿ. ಬೆಳ್ಳಿ ಸ್ವಚ್ಛಗೊಳಿಸುವ ರಾಸಾಯನಿಕಗಳನ್ನು ಬಳಸದಿರಿ.