alex Certify ಕನ್ನಡ – ಹಿಂದಿ ಚಿತ್ರಗಳ ಬಳಿಕ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ನಟಿ ಜಾಕ್ವೆಲಿನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡ – ಹಿಂದಿ ಚಿತ್ರಗಳ ಬಳಿಕ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ನಟಿ ಜಾಕ್ವೆಲಿನ್…!

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಬಳಿಕ ಕನ್ನಡ ಚಿತ್ರರಂಗದ ಅಂಗಳದಲ್ಲೂ ಮೈ ಬಳುಕಿಸಿ ಫೇಮಸ್ ಆಗಿದ್ದಾರೆ. ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಿರೋ ಈ ಬೆಡಗಿ ಕನ್ನಡದ ಬೆನ್ನಲ್ಲೇ ತೆಲುಗು ಚಿತ್ರರಂಗಕ್ಕೂ ಕಾಲಿಡಲಿದ್ದಾರೆ.

ಆಕ್ಷನ್-ಅಡ್ವೆಂಚರ್ ಪ್ರಾಜೆಕ್ಟ್ ವಿಕ್ರಾಂತ್ ರೋಣಾದಲ್ಲಿ ಜಾಕ್ವೆಲಿನ್ ಅವರ ಅಭಿನಯ ಮೆಚ್ಚುಗೆ ಗಳಿಸಿತ್ತು. ಶ್ರೀಲಂಕಾದ ಸುಂದರಿ ಕಾಣಿಸಿಕೊಂಡ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ತನ್ನ ಪಾತ್ರಕ್ಕಾಗಿ ಪ್ರೇಕ್ಷಕರಿಂದ ವ್ಯಾಪಕವಾಗಿ ಮೆಚ್ಚುಗೆಯನ್ನೂ ಜಾಕ್ವೆಲಿನ್ ಪಡೆದರು.

ಇಲ್ಲಿಯವರೆಗೂ ಹಿಂದಿ ಮತ್ತು ಕನ್ನಡದಲ್ಲಿ ಕೆಲಸ ಮಾಡಿದ್ದ ಅವರು ಈಗ ಹರಿಹರ ವೀರ ಮಲ್ಲು ಚಿತ್ರದ ಮೂಲಕ ತೆಲುಗು ಸಿನಿಮಾಗಳಿಗೆ ಕಾಲಿಡುತ್ತಿದ್ದಾರೆ.

ಪವನ್ ಕಲ್ಯಾಣ್ ಅವರೊಂದಿಗೆ ಹರಿ ಹರ ವೀರ ಮಲ್ಲು ಎಂಬ ಆಕ್ಷನ್ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.

ಫರ್ನಾಂಡೀಸ್ ಮಾತ್ರವಲ್ಲದೆ ಇತರ ಬಿ-ಟೌನ್ ಸುಂದರಿಯರಾದ ನೋರಾ ಫತೇಹಿ, ಸೋನಾಕ್ಷಿ ಸಿನ್ಹಾ ಮತ್ತು ನರ್ಗಿಸ್, ಪವನ್ ಕಲ್ಯಾಣ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ನಟ ಅರ್ಜುನ್ ರಾಂಪಾಲ್ ಅವರು ಔರಂಗಜೇಬ್ ಪಾತ್ರದಲ್ಲಿ ಮತ್ತು ಜಾಕ್ವೆಲಿನ್ ಅವರ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ರೋಹಿತ್ ಶೆಟ್ಟಿ ನಿರ್ದೇಶನದ ಸರ್ಕಸ್ ಎಂಬ ಮುಂಬರುವ ಚಿತ್ರದಲ್ಲಿ ಜಾಕ್ವೆಲಿನ್ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 23 ರಂದು ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಜಾಕ್ವೆಲಿನ್ ಫರ್ನಾಂಡೀಸ್ ಸಿನಿಮಾಗಳಲ್ಲದೆ, ಸುಕೇಶ್ ಚಂದ್ರಶೇಖರ್ ಅವರೊಂದಿಗೆ 200 ಕೋಟಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣದಿಂದ ಸುದ್ದಿಯಲ್ಲಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...