ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ವಿಧಿವಶರಾಗಿದ್ದಾರೆ. ತಮ್ಮ ಕಂಚಿನ ಕಂಠದಿಂದಲೇ ಚಿತ್ರರಂಗದಲ್ಲಿ ಮನೆ ಮಾತಾಗಿದ್ದ ಅಶೋಕ್ ರಾವ್ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.
75 ವರ್ಷದ ಅಶೋಕ್ ರಾವ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದ ರಾತ್ರಿ ಮನೆಯಲ್ಲಿಯೇ ಅವರು ಕೊನೆಯುಸಿರೆಳೆದರೆಂದು ಕುಟುಂಬ ಮೂಲಗಳು ತಿಳಿಸಿವೆ.
ಹೃದಯಾಘಾತದಿಂದ ಅಶೋಕ್ ರಾವ್ ವಿಧಿವಶರಾಗಿದ್ದಾರೆಂದು ಹೇಳಲಾಗಿದ್ದು, ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದಾರೆ.