ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕರಡಿ ಕನ್ನಡಿ ನೋಡುತ್ತಿರುವ ದೃಶ್ಯವಿದೆ. ಅದರ ಪ್ರತಿಕ್ರಿಯೆಯನ್ನು ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಹೌದು, ಕನ್ನಡಿಯಲ್ಲಿ ತನ್ನನ್ನು ನೋಡಿದ ನಂತರ ಕರಡಿ ಸಂಪೂರ್ಣವಾಗಿ ಗಾಬರಿಯಾಯಿತು. ಅದರ ಮುಖದ ಮೇಲಿನ ಆಘಾತವು ಸ್ಪಷ್ಟವಾಗಿ ಗೋಚರಿಸಿತ್ತು. ಅದರ ಮುದ್ದಾದ ವರ್ತನೆಗಳು ನಿಮ್ಮನ್ನು ಜೋರಾಗಿ ನಗುವಂತೆ ಮಾಡುತ್ತದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಕರಡಿ ಕನ್ನಡಿಯನ್ನು ನೋಡುವುದು ಮತ್ತು ತನ್ನದೇ ಆದ ಪ್ರತಿಬಿಂಬವನ್ನು ನೋಡುವುದನ್ನು ತೋರಿಸುತ್ತದೆ. ಈ ದೃಶ್ಯ ಅದನ್ನು ಆಘಾತಗೊಳಿಸುತ್ತದೆ. ಭೀತಿಗೊಂಡ ಕರಡಿ ಜೋರಾಗಿ ಕಿರುಚುತ್ತದೆ. ಅಲ್ಲದೆ ಮರದಲ್ಲಿ ನೇತಾಡಿಸಲಾಗಿದ್ದ ಕನ್ನಡಿಯನ್ನು ಪ್ರಾಣಿ ನಾಶಪಡಿಸುತ್ತದೆ. ಈ ವಿಡಿಯೋ ನೋಡಿ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ.