ಮುಂಬಯಿ : ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಇದೇ ತಿಂಗಳಿಂದ ಟೆಸ್ಟ್ ಸರಣಿ ಆಡಲಿದೆ. ಇದಕ್ಕಾಗಿ ತಂಡವನ್ನು ಕೂಡ ಪ್ರಕಟಿಸಲಾಗಿದೆ. ಆದರೆ, ಸದ್ಯ ಹಿಟ್ ಮ್ಯಾನ್ ಗಾಯದಿಂದಾಗಿ ಹಿಂದೆ ಸರಿಯಲಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಗೆ ಉಪನಾಯಕನ ಪಟ್ಟ ಒಲಿದು ಬಂದಿದೆ.
ಮುಂಬಯಿನ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು. ರೋಹಿತ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಸದ್ಯ ಪರೀಕ್ಷೆಗೆ ಒಳಗಾಗಿರುವ ಅವರು ತಂಡದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ರೋಹಿತ್ ಸ್ಥಾನಕ್ಕೆ ಭಾರತ ಎ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಆಯ್ಕೆಯಾಗಿದ್ದಾರೆ.
ಎಎನ್ ಐ ಪ್ರಟಿಸಿರುವ ವರದಿಯಂತೆ, ರೋಹಿತ್ ಶರ್ಮಾ ಟೆಸ್ಟ್ ನಿಂದ ಹಿಂದೆ ಉಳಿಯಲಿದ್ದು, ಕೆ.ಎಲ್. ರಾಹುಲ್ ಉಪ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ರೋಹಿತ್ ಏಕದಿನ ಪಂದ್ಯಕ್ಕೂ ಅಲಭ್ಯರಾಗುವ ಅನುಮಾನ ವ್ಯಕ್ತವಾಗುತ್ತಿದೆ.